ಕರುಣಾನಿಧಿಗೆ 'ಭಾರತ ರತ್ನ' ನೀಡಿ: ಡಿಎಂಕೆ ಆಗ್ರಹ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ದಿ.ಎಂ.ಕರುಣಾನಿಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ...

Published On :
ನವದೆಹಲಿ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ದಿ.ಎಂ.ಕರುಣಾನಿಧಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಿ ಗೌರವಿಸುವಂತೆ ಡಿಎಂಕೆ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಭಾರತ ರತ್ನ ನೀಡಿದರೆ ಮಾತ್ರ ಅತ್ಯುತ್ತಮ ಮತ್ತು ಇತರರಿಗೆ ಮಾದರಿಯಾಗುವಂತಹ ಕೆಲಸ ಮಾಡಿದ ತಮಿಳುನಾಡು ನಾಯಕನಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಡಿಎಂಕೆ ಹೇಳಿದೆ.
ಇಂದು ರಾಜ್ಯಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಡಿಎಂಕೆ ಸದಸ್ಯ ತಿರುಚಿ ಶಿವ ಅವರು, ಕರುಣಾನಿಧಿ ಅವರು ದೇಶದ ಅತ್ಯುನ್ನತ ನಾಯಕ ಮತ್ತು ದ್ರಾವಿಡರ ಅಗ್ರಮಾನ್ಯ ನಾಯಕ ಎಂದು ಬಣ್ಣಿಸಿದರು.
ಕರುಣಾನಿಧಿ ಅವರು ಬದುಕಿದ್ದ 94 ವರ್ಷಗಳಲ್ಲಿ 80 ವರ್ಷ ಸಾರ್ವಜನಿಕ ಜೀವನದಲ್ಲಿದ್ದು, ದೌರ್ಜನ್ಯಕ್ಕೆ ಒಳಗಾದವರ, ಹಿಂದೂಳಿದವರ ಮತ್ತು ಬಡವರಿಗಾಗಿ ಹೋರಾಡಿದ್ದಾರೆ ಎಂದರು.
ಕರುಣಾನಿಧಿ ಅವರು ಒಬ್ಬ ಅತ್ಯುತ್ತಮ ವಾಗ್ಮಿ, ಉತ್ತಮ ಬರಹಗಾರ, ಕಾದಂಬರಿಕಾರ, ಸಣ್ಣ-ಕಥೆಗಾರ, ತತ್ವಜ್ಞಾನಿ, ಲೋಕೋಪಕಾರಿ ಮತ್ತು ನಾಟಕಕಾರ. ಅಲ್ಲದೆ 80 ಚಿತ್ರಗಳಿಗೆ ಚಿತ್ರಕಥೆ ಬರೆದಿದ್ದರು. ಅವರ ಈ ಎಲ್ಲಾ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಅವರಿಗೆ ಭಾರತ ರತ್ನ ನೀಡಬೇಕು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


