ದೇಶ

ರಾಹುಲ್ ಗಾಂಧಿ ಇದೇ ತಿಂಗಳಲ್ಲಿ ಜರ್ಮನಿ, ಇಂಗ್ಲೆಂಡ್ ಪ್ರವಾಸ ಸಾಧ್ಯತೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇದೇ ತಿಂಗಳ 22 ಮತ್ತು 23 ರಂದು ಎರಡು ದಿನ ಜರ್ಮನಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.

ರಾಹುಲ್ ಗಾಂಧಿ ಇದೇ ತಿಂಗಳಲ್ಲಿ ಜರ್ಮನಿ, ಇಂಗ್ಲೆಂಡ್ ಪ್ರವಾಸ  ಸಾಧ್ಯತೆ
ರಾಹುಲ್ ಗಾಂಧಿ
Published On :

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ  ಇದೇ ತಿಂಗಳ 22 ಮತ್ತು 23 ರಂದು ಎರಡು ದಿನ ಜರ್ಮನಿಗೆ  ಪ್ರವಾಸ ಕೈಗೊಳ್ಳುವ  ಸಾಧ್ಯತೆ ಇದೆ.

 ಜರ್ಮನಿ ಪ್ರವಾಸದ ನಂತರ  24 ಮತ್ತು 25 ರಂದು ಇಂಗ್ಲೆಂಡ್  ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಎಐಸಿಸಿ ಅಧ್ಯಕ್ಷರಾದ ಬಳಿಕ ರಾಹುಲ್ ಗಾಂಧಿ ಎರಡನೇ ಬಾರಿಗೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಅಲ್ಲಿರುವ  ಅನಿವಾಸಿ ಭಾರತೀಯರು ಹಾಗೂ ಉದ್ಯಮಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದ ರಾಹುಲ್ ಗಾಂಧಿ ಅಮೆರಿಕಾದಲ್ಲಿ ಭಾರತೀಯ ಅನಿವಾಸಿಯರೊಂದಿಗೆ  ಆರ್ಥಿಕತೆ ಹಾಗೂ  ಉದ್ಯೋಗ ಅವಕಾಶಗಳ ಬಗ್ಗೆಗೆ ಭಾಷಣ ಮಾಡಿದ್ದರು.

ಅಲ್ಲದೇ ಈ ವರ್ಷದ ಜನವರಿಯಲ್ಲಿ ಬಹ್ರೇನ್  ಹಾಗೂ ಮಾರ್ಚ್ ನಲ್ಲಿ ಸಿಂಗಾಪುರ , ಮಲೇಷ್ಯಾ ಪ್ರವಾಸ ಕೈಗೊಂಡಿದ್ದರು. ಜೂನ್ ತಿಂಗಳಲ್ಲಿ ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ. ತದನಂತರ ಅದನ್ನು ರದ್ದುಪಡಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.