ದೇಶ

ಕರುಣಾನಿಧಿ ಮತ್ತು ಜಯಲಲಿತಾ: ಪಕ್ಷಗಳು ಬೇರೆ, ಆದರೆ ಇವುಗಳಲ್ಲಿ ಇಬ್ಬರ ನಿಲುವು ಒಂದೇ ಆಗಿತ್ತು!

ಎರಡು ವರ್ಷಗಳ ಅವಧಿಯಲ್ಲಿ ತಮಳುನಾಡು ಇಬ್ಬರು ಪ್ರಮುಖ ನಾಯಕರುಗಳನ್ನು ಕಳೆದುಕೊಂಡಿದೆ ಇಬ್ಬರು ಬೇರೆ ಬೇರೆ ಪಕ್ಷಗಳ ನಾಯಕರಾಗಿದ್ದರೂ,..

ಕರುಣಾನಿಧಿ ಮತ್ತು ಜಯಲಲಿತಾ: ಪಕ್ಷಗಳು ಬೇರೆ, ಆದರೆ ಇವುಗಳಲ್ಲಿ ಇಬ್ಬರ ನಿಲುವು ಒಂದೇ ಆಗಿತ್ತು!
ಜಯಲಲಿತಾ ಮತ್ತು ಕರುಣಾನಿಧಿ
Published On :
ಚೆನ್ನೈ: ಎರಡು ವರ್ಷಗಳ ಅವಧಿಯಲ್ಲಿ ತಮಳುನಾಡು ಇಬ್ಬರು ಪ್ರಮುಖ ನಾಯಕರುಗಳನ್ನು ಕಳೆದುಕೊಂಡಿದೆ ಇಬ್ಬರು ಬೇರೆ ಬೇರೆ ಪಕ್ಷಗಳ ನಾಯಕರಾಗಿದ್ದರೂ, ದೆಹಲಿಯ ಹಲವು ವಿಷಯಗಳ ವಿರುದ್ಧ ಚೆನ್ನೈನಲ್ಲಿ ಸಮರ್ಥ ನಿರ್ಧಾರ ಕೈಗೊಂಡಿದ್ದರು.
2016ರ ಡಿಸೆಂಬರ್ ನಲ್ಲಿ ಜಯಲಲಿತಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು, ಆದರೆ ಕರುಣಾನಿಧಿ ಹಲವು ವರ್ಷಗಳಿಂದ ರಾಜಕೀಯದಲ್ಲಿ ನಿಷ್ಕ್ರಿಯರಾಗಿದ್ದರು. ಈನ ನಡುವೆ ಕೇಂದ್ರ ಮತ್ತು ತಮಿಳುನಾಡು  ರಾಜ್ಯದ ನಡುವೆ ಹಲವು ಸಂಘರ್ಷಗಳು ಏರ್ಪಟ್ಟವು.
ಜಯಲಲಿತಾ ನಿಧನದ ನಂತರ ಜಲ್ಲಿಕಟ್ಟು ಪರವಾಗಿ ಪ್ರತಿಭಟನೆಗಳು ನಡೆದವು.  ಚೆನ್ನೈ ನ ಮರೀನಾ ಬೀಚ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಭಾಗವಹಿಸರಲಿಲ್ಲ, ದೆಹಲಿಯ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ, 
ಈ ಸಿದ್ಧಾಂತದಲ್ಲಿ ನಂಬಿಕೆ ಇರಲಿ ಬಿಡಲಿ, ಜಯಲಲಿತಾ ಮತ್ತು ಕರುಣಾನಿಧಿ ಇಬ್ಬರು ರಾಜ್ಯದ ಸ್ವಾಯತ್ತಕತೆ ವಿಷಯದಲ್ಲಿ ಒಂದೇ ನಿಲುವು ಅನುಸರಿಸಿದ್ದರು. ಇಬ್ಬರು ನಾಯಕರು ಪರಸ್ಪರ ಬದ್ದ ವೈರಿಗಳಾಗಿದ್ದರೂ ಕೂಡ ವ್ಯವಸ್ಥೆ ಪರವಾಗಿ ಇಬ್ಬರು ಒಂದೇ ವೇದಿಕೆಯಲ್ಲಿ ನಿಲ್ಲುತ್ತಿದ್ದರೂ, ಇಬ್ಬರು ಭೌತಿಕವಾಗಿ ಜೊತೆಯಾಗಿಲ್ಲದಿದ್ದರೂ ಅವರ ನಿರ್ಧಾರಗಳು ರಾಜ್ಯದ ವಿಷಯವಾಗಿ ಒಂದೇ ಆಗಿರುತ್ತಿತ್ತು.
ಜಯಲಲಿತಾ ಕೇಂದ್ರ ಸರ್ಕಾರದ ಹಲವು ನಿರ್ಧಾರಗಳ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿದ್ದರು,  ತಮಿಳುನಾಡಿನಲ್ಲಿ ಜಿಎಸ್ ಟಿ ಜಾರಿಗೆ ತರುವುದು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, ವಿದ್ಯುತ್ ವಲಯದ ಮರು ಸ್ಥಾಪನೆ ಸೇರಿದಂತೆ ಹಲವು ವಿಷಯಗಳಿಗೆ ಕೇಂದ್ರವನ್ನು ವಿರೋಧಿಸಿದ್ದರು.
ಕರುಣಾ ನಿಧಿ ಕೂಡ ಇಂಥ ವಿಷಯಗಳಿಗೆ ಹೊರತಾಗಿರಲಿಲ್ಲ, ಅವರದ್ದೂ ಇದೇ ರೀತಿಯ ಸುದೀರ್ಘ ಇತಿಹಾಸವಿದೆ, ಮೀಸಲಾತಿ,ಸಂಬಂದಹಲವು ಹೋರಾಟ ನಡೆಸಿದರು. ಜೊತೆಗೆ ಸ್ವತಂತ್ರ್ಯ ದಿನಾಚರಣೆಯಂದು ರಾಷ್ಟ್ರ ಧ್ವಜ ಹಾರಿಸಿದ್ದರು. ಇವುಗಳೆಲ್ಲಾದರ ಜೊತೆ ತಮ್ಮದೇ ಆದ ಭಾಷೆಯನ್ನು ಹೊಂದಿರುವ ರಾಜ್ಯಗಳ ಮೇಲೆ ಹಿಂದಿ ಹೇರಿಕೆಗೆ ತಮಿಳುನಾಡಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದರ ಪರಿಣಾಮವಾಗಿ ತಮಿಳುನಾಡು ಜನರಿಗೆ ಜಯಲಲಿತಾ ಮತ್ತು ಕರುಣಾನಿಧಿ ಒಂದೆ ತೆರನಾಗಿ ಕಾಣುತ್ತಿದ್ದರು. ನಮ್ಮ ಜೀವನ ನಿರ್ಧರಿಸುವ ತೀರ್ಮಾನಗಳು ಚೆನ್ನೈನಲ್ಲೇ ಆಗಬೇಕೇ ಹೊರತು ದೆಹಲಿಯಲ್ಲ ಎಂದು ಅರಿತಿದ್ದರು. ಇಬ್ಬರು ದೈತ್ಯ ನಾಯಕರ ಕಣ್ಮರೆಯಿಂದಾಗಿ ತಮಿಳುನಾಡಿನಲ್ಲಿ ದೆಹಲಿ ಮೂಲದ ಪಕ್ಷಗಳಿಗೆ ಹೊಸ ಭರವಸೆ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.