ಕರುಣಾನಿಧಿಯವರ ಸಹಿ ಹಿಂದಿನ ಆಸಕ್ತಿಕರ ವಿಷಯ
ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಎಲ್ಲರ ಗಮನ ಸೆಳೆಯುತ್ತಿತ್ತು...

ಕರುಣಾನಿಧಿಯವರು ಮಾಡುತ್ತಿದ್ದ ಸಹಿ ಎಲ್ಲರ ಗಮನ ಸೆಳೆದಿತ್ತು, ಅದರ ಹಿಂದೆ ವಿಶೇಷವಿದೆ. ಅದರಲ್ಲಿ ವಿಶೇಷ ಸಂದೇಶವಿದೆ, ತಮ್ಮ ಗೋಪಾಲಪುರಂ ನಿವಾಸವನ್ನು ಅಣ್ಣೈ ಅಂಜುಗಂ ಟ್ರಸ್ಟ್ ಗೆ ಕೊಡುಗೆಯಾಗಿ ನೀಡಿದ್ದ ವೇಳೆ ಸಹಿ ಮಾಡುವಾಗ ಸಹಿಯ ಹಿಂದಿನ ವಿಶೇಷತೆಯನ್ನು ಬಹಿರಂಗಪಡಿಸಿದ್ದರು.
ಹಾಳೆಗಳಲ್ಲಿ ಅವರ ಸಹಿಯನ್ನು ಲಗತ್ತಿಸುವಂತೆ ಹೇಳುತ್ತಿದ್ದಾಗ ಅವರ ಹಿಂದಿನ ದಿನಗಳ ನೆನಪುಗಳು ಅವರ ಮುಂದೆ ಬರುತ್ತಿದ್ದವಂತೆ.ದ್ರಾವಿಡ ನಾಡು ನನ್ನ ಸಹಿಯಲ್ಲಿದೆ ಎಂದು ತನ್ನ ಆಪ್ತರಿಗೆ ಹೇಳುತ್ತಿದ್ದರಂತೆ. ಸಹಿಯಲ್ಲಿನ ವಿ ಆಕಾರದ ತಿರುವು ಭಾರತದ ಭೂಪಟದಲ್ಲಿ ದಕ್ಷಿಣ ಭಾರತವನ್ನು ಪ್ರತಿನಿಧಿಸುತ್ತದೆ.
ಸಹಿಯ ಕೆಳಗಿನ ತಿರುವು ಶ್ರೀಲಂಕಾವನ್ನು ಪ್ರತಿನಿಧಿಸುತ್ತದೆ ಎಂದು ಕೂಡ ಅವರು ಹೇಳುತ್ತಿದ್ದರು. ಹಲವು ದಶಕಗಳ ಹಿಂದೆ ಅವರು ತಿರುಚಿ ಜೈಲಿನಲ್ಲಿದ್ದಾಗ ಈ ರೀತಿ ವಿಶೇಷ ಸಹಿ ಮಾಡಲು ಆರು ತಿಂಗಳು ಸತತ ಅಭ್ಯಾಸ ಮಾಡಿದ್ದರಂತೆ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


