ನಿಮ್ಮನ್ನೂ ಇಸ್ಲಾಂಗೆ ಮತಾಂತರ ಮಾಡಿ, ಗಡ್ಡ ಬೆಳೆಸುವಂತೆ ಮಾಡುತ್ತೇವೆ: ಅಸಾದುದ್ದೀನ್ ಒವೈಸಿ
ಅಲ್ಪ ಸಂಖ್ಯಾತರ ಮೇಲೆ ದಬ್ಬಾಳಿಕೆ ಬೇಡ.. ನಾವು ನಿಮ್ಮನ್ನೂ ಇಸ್ಲಾಂಗೆ ಮತಾಂತರ ಮಾಡಿ ನೀವೂ ಕೂಡ ಗಡ್ಡ ಬೆಳೆಸುವಂತೆ ಮಾಡುತ್ತೇವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

Published On :
ಹೈದರಾಬಾದ್: ಅಲ್ಪ ಸಂಖ್ಯಾತರ ಮೇಲೆ ದಬ್ಬಾಳಿಕೆ ಬೇಡ.. ನಾವು ನಿಮ್ಮನ್ನೂ ಇಸ್ಲಾಂಗೆ ಮತಾಂತರ ಮಾಡಿ ನೀವೂ ಕೂಡ ಗಡ್ಡ ಬೆಳೆಸುವಂತೆ ಮಾಡುತ್ತೇವೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಹರ್ಯಾಣ ಮೂಲದ ಅಲ್ಪ ಸಂಖ್ಯಾತ ವ್ಯಕ್ತಿಯನ್ನು ಮೂವರು ವ್ಯಕ್ತಿಗಳು ಬಲವಂತವಾಗಿ ಅವರ ಗಡ್ಡ ಬೋಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಒವೈಸಿ, ಗಡ್ಡ ಬೋಳಿಸಿದ ಮಾತ್ರಕ್ಕೆ ಅವರೇನೋ ಮಹಾ ಸಾಧನೆ ಮಾಡದಂತಲ್ಲ. ಯಾರು ಗಡ್ಡ ಬೋಳಿಸಿ ಅವರಿಗೆ ಅಪಮಾನ ಮಾಡಿದ್ದಾರೋ ಅವರು ಎಚ್ಚೆತ್ತುಕೊಳ್ಳಬೇಕು. ನಾನು ಮುಸ್ಲಿಮರು, ನೀವು ನಮ್ಮ ಕುತ್ತಿಗೆ ಸೀಳಿದರೂ ನಾವು ಮುಸ್ಲಿಮರೇ.. ಯಾರು ಗಡ್ಡಬೋಳಿಸಿದರೋ ಅವರನ್ನೇ ನಾವು ಇಸ್ಲಾಂಗೆ ಮತಾಂತರ ಮಾಡಿ ಅವರೂ ಕೂಡ ಗಡ್ಡ ಬೆಳೆಸುವಂತೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಹರ್ಯಾಣದ ಗುರುಗ್ರಾಮದ ಖಂಡ್ಸಾ ಮಂಡಿ ಪ್ರದೇಶದಲ್ಲಿ ಮೂವರು ವ್ಯಕ್ತಿಗಳು ಜೆಫ್ ರುದ್ದೀನ್ ಎಂಬ ಅಲ್ಪ ಸಂಖ್ಯಾತ ವ್ಯಕ್ತಿಯನ್ನು ಬಲವಂತವಾಗಿ ಸಲೂನ್ ಗೆ ಕರೆದುಕೊಂಡು ಹೋಗಿ ಅವರ ಗಡ್ಡ ಬೋಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರನ್ನು ಆಧರಿಸಿ ಗುರುಗ್ರಾಮ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಎಕ್ಲಾಶ್, ಗೌರವ್ ಮತ್ತು ನಿತಿನ್ ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


