ರಾಷ್ಟ್ರಪತಿ ಕೋವಿಂದ್'ಗೆ ಜೀವ ಬೆದರಿಕೆ: ಕೇರಳ ಅರ್ಚಕ ಬಂಧನ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಕೇರಳದ ತ್ರಿಸೂರಿನ ಚಿರಕ್ಕಲ್ ಭಗವತಿ ದೇಗುಲದ ಅರ್ಚಕನನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ...

Published On :
ತ್ರಿಸೂರು: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಜೀವ ಬೆದರಿಕೆ ಹಾಕಿದ್ದ ಕೇರಳದ ತ್ರಿಸೂರಿನ ಚಿರಕ್ಕಲ್ ಭಗವತಿ ದೇಗುಲದ ಅರ್ಚಕನನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಜಯರಾಮನ್ ಬಂಧನಕ್ಕೊಳಗಾಗಿರುವ ಅರ್ಚಕನೆಂದು ಹೇಳಲಾಗುತ್ತಿದೆ. ಪಾನಮತ್ತನಾಗಿದ್ದ ಅರ್ಚಕ ಪೊಲೀಸ್ ಠಾಣೆ ಕರೆ ಮಾಡಿದ್ದು, ರಾಮನಾಥ್ ಕೋವಿಂದ್ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಕೂಡಲೇ ಎಚ್ಚೆತ್ತ ಪೊಲೀಸರು ತಂಡವನ್ನು ರಚನೆ ಮಾಡಿ ಜಯರಾಮನ್ ಎಂಬುವವರನ್ನು ಬಂಧನಕ್ಕೊಳಪಡಿಸಿದ್ದಾರೆ. ಕರೆ ಮಾಡಿದ ಮರು ದಿನ ಪಾನಮತ್ತ ಅರ್ಚಕನಿಗೆ ಪ್ರಜ್ಞೆ ಬಂದಿದ್ದು, ಈ ವೇಳೆ ತನಗೇನು ತಿಳಿದಿಲ್ಲ ಎಂಬಂತೆ ನಡೆದುಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.
ಕೇರಳ ರಾಜ್ಯ ವಿಧಾನಸಭೆ ವಜ್ರಮಹೋತ್ಸವ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ 'ಫೆಸ್ಟಿವಲ್ ಆಫ್ ಡೆಮಾಕ್ರಸಿ' ಕಾರ್ಯಕ್ರಮವನ್ನು ಉದ್ಘಾಟಿಸುವ ಸಲುವಾಗಿ ಪ್ರಸ್ತುತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೇರಳದ ತ್ರಿವೆಂಡ್ರಮ್'ಗೆ ಭೇಟಿ ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಕೋವಿಂದ್ ಅವರ ರಾಜ್ಯ ಪ್ರವಾಸ ಅಂತ್ಯಗೊಂಡ ಬಳಿಕವಷ್ಟೇ ಅರ್ಚಕನನ್ನು ಬಿಡುಗಡೆಗೊಳಿಸದಿರಲು ನಿರ್ಧರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


