ದೇಶ

ಇವರು ಬಿಜೆಪಿಯ ಹಿರಿಯ 'ಸಮರ ಅಶ್ವಗಳು'; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೆ!

ಸೇವೆಯಿಂದ ನಿವೃತ್ತಿ ಎಂಬುದು ಬೇರೆ ಉದ್ಯೋಗಗಳಿಗಿರುವಂತೆ ರಾಜಕೀಯದಲ್ಲಿ ಇಲ್ಲ. 90 ವರ್ಷದವರೆಗೆ ...

ಇವರು ಬಿಜೆಪಿಯ ಹಿರಿಯ 'ಸಮರ ಅಶ್ವಗಳು'; ಇವರಿಗೆ ವಯಸ್ಸು ಕೇವಲ ಸಂಖ್ಯೆಯಷ್ಟೆ!
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ
Published On :

ನವದೆಹಲಿ: ಸಾಮಾನ್ಯವಾಗಿ ಯಾವುದೇ ಉದ್ಯೋಗದಲ್ಲಿ ನಿವೃತ್ತಿ ಎಂಬುದಿರುತ್ತದೆ. ಅದು ಸರ್ಕಾರಿ ಸೇವೆ ಆಗಿರಬಹುದು ಅಥವಾ ಖಾಸಗಿ ವಲಯದ ಸೇವೆ ಇರಬಹುದು, ಆದರೆ ರಾಜಕೀಯದಲ್ಲಿ  ಮಾತ್ರ ಹಾಗಲ್ಲ.

90 ವರ್ಷದವರೆಗೆ ಇಳಿವಯಸ್ಸಿನಲ್ಲಿಯೂ ರಾಜಕೀಯದಲ್ಲಿ ಸಕ್ರಿಯರಾಗಿರುವವರು ಇದ್ದಾರೆ. ಚುನಾವಣೆಯಲ್ಲಿ ಕೂಡ ಸ್ಪರ್ಧಿಸುತ್ತಾರೆ. ಬಿಜೆಪಿಯಲ್ಲಿ ಅಂತಹ ಹಲವು ನಾಯಕರಿದ್ದಾರೆ, ಅವರಿಗೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಅವರು ಗೆಲ್ಲುವ ಕುದುರೆಗಳಂತೆ, ಕೇಸರಿ ಪಾಳೆಯಕ್ಕೆ ಒಂದು ರೀತಿ ಟಾನಿಕ್.

ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ. 'ನಮ್ಮ ಪಾರ್ಟಿಯಲ್ಲಿ ವಯಸ್ಸು ರಾಜಕೀಯ ಮುಖಂಡರಿಗೆ ಕೇವಲ ಸಂಖ್ಯೆಯಷ್ಟೆ, ವಯಸ್ಸು ಚುನಾವಣೆಯಲ್ಲಿ ಸ್ಪರ್ಧಿಸಲು ಮಾನದಂಡವಲ್ಲ' ಎಂದು ಹೇಳಿರುವುದು ಹಿರಿಯ ನಾಯಕರು ಸ್ಪರ್ಧಿಸುವ ಸೂಚನೆ ನೀಡಿದ್ದಾರೆ.

ಬಿಜೆಪಿಯಲ್ಲಿ ಪ್ರಸ್ತುತ 75 ವರ್ಷ ದಾಟಿದ 13 ಲೋಕಸಭಾ ಸದಸ್ಯರಿದ್ದಾರೆ.ಮುಂದಿನ ವರ್ಷದ ಚುನಾವಣೆಯಲ್ಲಿ ಸ್ಪರ್ಧಿಸಬೇಕೆ ಅಥವಾ ಬೇಡವೇ ಎಂದು ರಾಜಕೀಯ ಮುಖಂಡರ ತೀರ್ಮಾನಕ್ಕೆ ಬಿಡಲು ಬಿಜೆಪಿ ಪಾರ್ಟಿ ನಿರ್ಧರಿಸಿದೆ. 75 ವರ್ಷ ದಾಟಿದ ಕೆಲವು ಸದಸ್ಯರು ಸತತ ಗೆಲುವು ಕಾಣುತ್ತಾ ಬರುತ್ತಿದ್ದು ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಅವರು ಚುನಾವಣೆಯ ಸ್ಪರ್ಧೆಯಲ್ಲಿ ಉಳಿದರೆ ಹತ್ತಿರದ ಕ್ಷೇತ್ರದ ಸ್ಪರ್ಧಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಇದು ಒಟ್ಟಾರೆಯಾಗಿ ಕೇಸರಿ ಪಕ್ಷಕ್ಕೆ ಸಹಾಯವಾಗಲಿದೆ ಎಂದು ಬೆಜಿಪಿ ಕಾರ್ಯಕಾರಿಣಿಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

13 ಬಿಜೆಪಿ ಸಂಸದರು ಈಗಲೂ ಕೂಡ ರಾಜಕೀಯವಾಗಿ ಅತ್ಯಂತ ಪ್ರಭಾವಿಗಳಾಗಿದ್ದು ಅದನ್ನು ಲೋಕಸಭೆ ಚುನಾವಣೆಯಲ್ಲಿ ಪಕ್ಷ ಬಳಸಿಕೊಳ್ಳುವ ಸಾಧ್ಯತೆಯಿದೆ. ಉದಾಹರಣೆಗೆ ಕಲ್ರಾಜ್ ಮಿಶ್ರಾ ಅವರನ್ನು ತೆಗೆದುಕೊಂಡರೆ, 75 ವರ್ಷ ಕಳೆದ ಮೇಲೆ ಕೇಂದ್ರ ಸಂಪುಟದಲ್ಲಿ ಅವರು ಸಚಿವರಾಗಲಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತ ಸೆಳೆಯುವಲ್ಲಿ ಅವರು ಪ್ರಮುಖರಾಗಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಶಾಂತ ಕುಮಾರ್ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪ್ರಚಾರಕರಾಗಿದ್ದರು. ಬಿಜೆಪಿಗೆ ಹೆಚ್ಚಿನ ಒಲವು ಜನರಲ್ಲಿ ಮೂಡಿ ಕಾಂಗ್ರೆಸ್ ಸೋತಿತು.

ಈ ವಾರ ಉತ್ತಮ ಸಂಸದ ಪ್ರಶಸ್ತಿ ಗಳಿಸಿದ ಹುಕುಂದೇವ್ ನಾರಾಯಣ್ ಯಾದವ್ ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಲೋಕಸಭೆಯಲ್ಲಿ ಚೆನ್ನಾಗಿ ವಾದ ಮಾಡುತ್ತಾರೆ. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಮುಂದಿನ ವರ್ಷ ಕೂಡ ಮಧ್ಯ ಪ್ರದೇಶದ ಇಂದೋರ್ ನಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಆದರೆ 13 ಸಂಸದರಲ್ಲಿ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಆಯ್ಕೆಯಾದ ಹೊಲಾ ಸಿಂಗ್ ಅವರಿಗೆ ಮುಂದಿನ ವರ್ಷ ಚುನಾವಣೆಯಲ್ಲಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.