ದೇಶ

ಜಮ್ಮು- ಕಾಶ್ಮೀರ ಹೈಕೋರ್ಟ್ ಮೊದಲ ಮಹಿಳಾ ಸಿಎಜೆ ಆಗಿ ಗೀತಾ ಮಿತ್ತಲ್ ನೇಮಕ

ಜಮ್ಮು - ಕಾಶ್ಮೀರ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆಯಾಗಿ ಗೀತಾ ಮಿತ್ತಲ್ ನೇಮಕವಾಗಿದ್ದಾರೆ....

ಜಮ್ಮು- ಕಾಶ್ಮೀರ ಹೈಕೋರ್ಟ್  ಮೊದಲ ಮಹಿಳಾ ಸಿಎಜೆ ಆಗಿ ಗೀತಾ ಮಿತ್ತಲ್ ನೇಮಕ
ಗೀತಾ ಮಿತ್ತಲ್
Published On :
ನವದೆಹಲಿ: ಜಮ್ಮು - ಕಾಶ್ಮೀರ ಹೈಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಾಧೀಶೆಯಾಗಿ ಗೀತಾ ಮಿತ್ತಲ್ ನೇಮಕವಾಗಿದ್ದಾರೆ.
ಸದ್ಯ ದೆಹಲಿ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿದ್ದರು.  ಗೀತಾ ಮಿತ್ತಲ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ. 
ಜುಲೈ 16 ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಜಮ್ಮು ಕಾಶ್ಮೀರ ಹೈಕೋರ್ಟ್ ಗೆ ಗೀತ್ ಮಿತ್ತಲ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. 
ದೆಹಲಿ ಹೈಕೋರ್ಟ್​ನ ಮá-ಖ್ಯ ಹಂಗಾಮಿ ನ್ಯಾಯಮೂರ್ತಿಯಾಗಿ ನೇಮಕವಾಗಿರುವ ಗೀತಾ ಮಿತ್ತಲ್ ಜನಿಸಿದ್ದು 1958ರ ಡಿಸೆಂಬರ್ 9ರಂದು. ದೆಹಲಿಯ ಶ್ರೀರಾಮ್ ಮಹಿಳಾ ಕಾಲೇಜಿನಲ್ಲಿ ಪದವಿ ಪಡೆದ ಇವರು, 1981ರಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಗಳಿಸಿದರು. 2004ರಲ್ಲಿ ದೆಹಲಿ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡ ಮಿತ್ತಲ್ ಅವರ ಸ್ಥಾನವನ್ನು 2006ರಲ್ಲಿ ಕಾಯಂಗೊಳಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.