ಒಡಹುಟ್ಟಿದ ತಂಗಿಯ ಮಗಳ ಮೇಲೆ ನಾಲ್ವರು ಮಾವಂದಿರಿಂದ ಅತ್ಯಾಚಾರ!
ಒಡಹುಟ್ಟಿದ ತಂಗಿಯ ಮಗಳ ಮೇಲೆ ನಾಲ್ವರು ಸೋದರ ಮಾವಂದಿರು ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಅಹಮದಾಬಾದ್ ನ ಶಾಹ್ ಪುರದಲ್ಲಿ ನಡೆದಿದೆ...

Published On :
ಅಹಮದಾಬಾದ್: ಒಡಹುಟ್ಟಿದ ತಂಗಿಯ ಮಗಳ ಮೇಲೆ ನಾಲ್ವರು ಸೋದರ ಮಾವಂದಿರು ಸಾಮೂಹಿಕ ಅತ್ಯಾಚಾರ ನಡೆಸಿರುವ ದಾರುಣ ಘಟನೆ ಅಹಮದಾಬಾದ್ ನ ಶಾಹ್ ಪುರದಲ್ಲಿ ನಡೆದಿದೆ.
ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತ ಯುವತಿಯ ತಂದೆ ತೀರಿಕೊಂಡಿದ್ದರು. ಇನ್ನು ತಾಯಿ ಬೇರೆ ಮದುವೆ ಮಾಡಿಕೊಂಡಿದ್ದರು. ಹೀಗಾಗಿ ಯುವತಿ ಮತ್ತು ಒಡಹುಟ್ಟಿದವರಿಬ್ಬರು ಅಜ್ಜಿಯ ಮನೆಯಲ್ಲಿ ವಾಸವಿದ್ದರು.
ಸಂತ್ರಸ್ತ ಯುವತಿ ಅಜ್ಜಿಯ ಜತೆ ಮನೆಯಲ್ಲಿ ಮಲಗಿದ್ದಾಗ ನಾಲ್ವರು ಬಂದು ಅತ್ಯಾಚಾರ ನಡೆಸಿದ್ದಾರೆ. ಇಬ್ಬರು ಕೈ ಮತ್ತು ಕಾಲು ಹಿಡಿದುಕೊಂಡಿದ್ದು ಇಬ್ಬರು ರೇಪ್ ಮಾಡಿರುವುದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಸಂತ್ರಸ್ತ ಯುವತಿ ಜತೆ ಆರೋಪಿಗಳಿಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪವಿತ್ತು. ಈ ಮೂವರು ಮನೆಯಲ್ಲೇ ಇದ್ದರೆ ಆಸ್ತಿಯು ಕೈತಪ್ಪುತ್ತದೆ ಎಂಬ ಕಾರಣಕ್ಕೆ ಅವರನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


