ಎನ್ಆರ್ ಸಿ: ನಾಗಾಲ್ಯಾಂಡ್, ಮೇಘಾಲಯಕ್ಕೆ ತೆರಳುತ್ತಿದ್ದವರನ್ನು ವಾಪಸ್ ಕಳಿಸಿದ ಪೊಲೀಸರು!
ಅಸ್ಸಾಂ ನ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಕರಡು ಈಗಷ್ಟೇ ಸಿದ್ಧವಾಗಿದೆ. ಇನ್ನಷ್ಟೇ ಅಂತಿಮಗೊಳ್ಳಬೇಕಿದ್ದರೂ ಅಸ್ಸಾಮ್ ನ ನೆರೆ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಗೆ ಅಕ್ರಮವಾಗಿ...

Published On :
ಅಸ್ಸಾಂ ನ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ಕರಡು ಈಗಷ್ಟೇ ಸಿದ್ಧವಾಗಿದೆ. ಇನ್ನಷ್ಟೇ ಅಂತಿಮಗೊಳ್ಳಬೇಕಿದ್ದರೂ ಅಸ್ಸಾಮ್ ನ ನೆರೆ ರಾಜ್ಯಗಳಾದ ಮೇಘಾಲಯ, ನಾಗಾಲ್ಯಾಂಡ್ ಗೆ ಅಕ್ರಮವಾಗಿ ಪ್ರವೇಶಿಸುವವರನ್ನು ತಡೆಗಟ್ಟುವ ಕಾರ್ಯಾಚರಣೆ ಈಗಾಗಲೇ ಪ್ರಾರಂಭವಾಗಿದೆ.
ಎನ್ ಆರ್ ಸಿ ಕರಡು ರೂಪದಲ್ಲಿದ್ದು, ಇನ್ನೂ ಅಂತಿಮ ಸ್ವರೂಪ ಪಡೆದುಕೊಂಡಿಲ್ಲ. ಆದ್ದರಿಂದ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೇ ಆತಂಕಪಡಬೇಡಿ ಎಂದು ಕೇಂದ್ರ ಸರ್ಕಾರವೇನೋ ಹೇಳಿದೆ. ಆದರೆ ನಾಗಾಲ್ಯಾಂಡ್ ನಲ್ಲಿರುವ ಪೊಲೀಸರು ಅಸ್ಸಾಂ ನಿಂದ ರಾಜ್ಯಕ್ಕೆ ಇರುವ ಎಲ್ಲಾ ಪ್ರವೇಶ ದ್ವಾರಗಳಲ್ಲೂ ತಪಾಸಣಾ ಕೇಂದ್ರಗಳನ್ನು ಪ್ರಾರಾಂಭಿಸಿದ್ದು, ರೈಲ್ವೆ ಮಾರ್ಗ ದಿಮಾಪುರ್ ನಲ್ಲಿಯೂ ಅಕ್ರಮವಾಗಿ ಭಾರತವನ್ನು ಪ್ರವೇಶಿಸುತ್ತಿರುವ ಬಾಂಗ್ಲಾ ಜನರನ್ನು ತಡೆಗಟ್ಟುವ ಕಾರ್ಯಾಚರಣೆಯನ್ನು ಖುದ್ದು ಪೊಲೀಸರೇ ಪ್ರಾರಂಭಿಸಿದ್ದಾರೆ.
ನಾಗಾಲ್ಯಾಂಡ್ ಮೇಘಾಲಯಕ್ಕೆ ತೆರಳಲು ಈಗಾಗಲೇ ಅಗತ್ಯ ಇರುವ ಇನ್ನರ್ ಲೈನ್ ಪರ್ಮಿಟ್ ನ್ನು ಹೊರತುಪಡಿಸಿ ಈಗ ತಾವು ಭಾರತೀಯ ಪೌರರು ಎಂಬುದನ್ನು ಸಾಬೀತುಪಡಿಸಲು ದಾಖಲೆಗಳನ್ನು ನೀಡಿದರಷ್ಟೇ ರಾಜ್ಯಗಳಿಗೆ ಪ್ರವೇಶ ನೀಡಲಾಗುತ್ತಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದೇ ಹೊರಟಿದ್ದ 10-12 ಜನರು ಪೊಲೀಸರಿಗೆ ಚೆಕ್ ಪಾಯಿಂಟ್ ಗಳಲ್ಲಿ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದು, ಅವರನ್ನು ಯಾವುದೇ ಮುಲಾಜೂ ಇಲ್ಲದೆ ವಾಪಸ್ ಕಳಿಸಲಾಗಿದೆ.
ಎನ್ ಆರ್ ಸಿ ಕರಡು ಮಂಡನೆಗೂ ಮುನ್ನ ನಾಗಾಲ್ಯಾಂಡ್ ಸರ್ಕಾರ ಅಕ್ರಮ ಬಾಂಗ್ಲಾ ವಲಸಿಗರ ಬಗ್ಗೆ ಜಾಗೃತರಾಗಿರಿ ಎಂದು ತನ್ನ ರಾಜ್ಯದ ಜನತೆಗೆ ಎಚ್ಚರಿಕೆ ನೀಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


