ಪಾಕ್ ತಡೆಯಲು ಯತ್ನಿಸಿದ್ದ ಕಿಶನ್ ಗಂಗಾ ಹೈಡಲ್ ವಿದ್ಯುತ್ ಘಟಕ ಉದ್ಘಾಟನೆ ಶೀಘ್ರ; ಪ್ರಧಾನಿ ಚಾಲನೆ
ಪಾಕಿಸ್ತಾನ ತಡೆಯಲು ಹರಸಾಹಸ ಪಟ್ಟಿದ್ದ ಕಾಶ್ಮೀರದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯ ಘಟಕವನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

Published On :
ಶ್ರೀನಗರ: ಪಾಕಿಸ್ತಾನ ತಡೆಯಲು ಹರಸಾಹಸ ಪಟ್ಟಿದ್ದ ಕಾಶ್ಮೀರದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯ ಘಟಕವನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
330 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಯೋಜನೆ ಇದಾಗಿದ್ದು ಪಾಕಿಸ್ತಾನ ಈ ಯೋಜನೆಯನ್ನು ತಡೆಯಲು ನಿರಂತರವಾಗಿ ಯತ್ನಿಸಿತ್ತು. ಕಿಶನ್ ಗಂಗಾ ನದಿ ಪಾಕಿಸ್ತಾನ- ಭಾರತ ಗಡಿ ಭಾಗದ ಎಲ್ಒಸಿಯಲ್ಲಿ ಹರಿಯುವ ನದಿಯಾಗಿದ್ದು, ಪಾಕ್ ಆಕ್ರಮಿತ ಕಾಶ್ಮೀರಕ್ಕೂ ಹರಿಯುತ್ತದೆ. ಈ ಹಿನ್ನೆಲೆಯಲ್ಲಿ ಕಿಶನ್ ಗಂಗಾ ನದಿ ನೀರನ್ನು ಬಳಸಿಕೊಂಡು ಜಲವಿದ್ಯುತ್ ಯೋಜನೆಯ ಘಟಕವನ್ನುನಿರ್ಮಿಮಿಸುವುದಕ್ಕೆ ಪಾಕ್ ವಿರೋಧ ವ್ಯಕ್ತಪಡಿಸಿತ್ತು.
ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯಿಂದ ವಾರ್ಷಿಕವಾಗಿ 1713 ಮಿಲಿಯನ್ ಯುನಿಟ್ ಗಳಷ್ಟು ವಿದ್ಯುತ್ ಉತ್ಪಾದನೆಯಾಗುವ ನಿರೀಕ್ಷೆ ಇದ್ದು, ಜಮ್ಮು-ಕಾಶ್ಮೀರಕ್ಕೆ ಶೇ.12 ರಷ್ಟು ವಿದ್ಯುತ್ ದೊರೆಯಲಿದೆ. ಈ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ ಶೀಘ್ರವೇ ವಿದ್ಯುತ್ ಉತ್ಪಾದನಾ ಘಟಕವನ್ನು ಉದ್ಘಾಟಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
PM Narendra ModiPakistanಪಾಕಿಸ್ತಾನಪ್ರಧಾನಿ ಮೋದಿKishanganga Hydel Power Plantಕಿಶನ್ ಗಂಗಾ ಹೈಡೆಲ್ ವಿದ್ಯುತ್ ಘಟಕ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


