ಜ್ಞಾನಪೀಠ ಪುರಸ್ಕೃತೆ ಮಹಾದೇವಿ ವರ್ಮಾಗೆ ಗೂಗಲ್ ಡೂಡಲ್ ನಮನ
ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ ಹೋರಾಟಗಾರ್ತಿ, ಮಹಿಳಾ ಹಕ್ಕು ಪ್ರತಿಪಾದಕಿ ಮಹಾದೇವಿ ವರ್ಮಾ ಜನ್ಮದಿನದ ನಿಮಿತ್ತ ಗೂಗಲ್ ಡೂಡಲ್ ಇಂದು ...

Published On :
ನವದೆಹಲಿ: ಜ್ಞಾನಪೀಠ ಪುರಸ್ಕೃತ ಕವಯತ್ರಿ, ಸ್ವಾತಂತ್ರ ಹೋರಾಟಗಾರ್ತಿ, ಮಹಿಳಾ ಹಕ್ಕು ಪ್ರತಿಪಾದಕಿ ಮಹಾದೇವಿ ವರ್ಮಾ ಜನ್ಮದಿನದ ನಿಮಿತ್ತ ಗೂಗಲ್ ಡೂಡಲ್ ಇಂದು ಅವರ ಚಿತ್ರವನ್ನು ಪ್ರಕಟಿಸಿ ವಿಶೇಷ ಗೌರವ ಸಲ್ಲಿಸಿದೆ.
ಡೂಡಲ್‌ನಲ್ಲಿ ಅವರನ್ನು ಡೈರಿ ಮತ್ತು ಪೆನ್ ಹಿಡಿದುಕೊಂಡು ಗಹನವಾದ ಚಿಂತನೆಯಲ್ಲಿ ಮುಳುಗಿರುವಂತೆ ಚಿತ್ರಿಸಲಾಗಿದೆ. ಅತಿಥಿ ಕಲಾವಿದ ಸೋನಾಲಿ ಜೋಹ್ರಾ ಈ ಚಿತ್ರ ಬರೆದಿದ್ದಾರೆ.
ಆಧುನಿಕ ಮೀರಾ ಎಂದೇ ಪ್ರಖ್ಯಾತರಾಗಿರುವ ವರ್ಮಾ ಮಾರ್ಚ್ 26, 1907ರಲ್ಲಿ ಫರುಖಾಬಾದ್‌ನಲ್ಲಿ ಜನಿಸಿದ್ದರು. 9ನೇ ವಯಸ್ಸಿಗೆ ಮದುವೆಯಾಗಿದ್ದ ಅವರು ತಂದೆ-ತಾಯಿಗಳ ಪ್ರೋತ್ಸಾಹದೊಂದಿಗೆ ತವರಿನಲ್ಲಿದ್ದುಕೊಂಡೇ ತಮ್ಮ ಶಿಕ್ಷಣವನ್ನು ಮುಂದುವರಿಸಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಭಾರತೀಯ ಸಾಹಿತ್ಯಕ್ಕೆ ಅವರು ನೀಡಿದ ಅನುಪಮ ಸೇವೆಯನ್ನು ಪರಿಗಣಿಸಿ 1982ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 1956ರಲ್ಲಿ ಪದ್ಮ ಭೂಷಣ, 1979ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಮತ್ತು 1988ರಲ್ಲಿ ಪದ್ಮ ವಿಭೂಷಣದಿಂದ ಸನ್ಮಾನಿತರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಗೂಗಲ್ ಡೂಡಲ್Freedom FighterGoogleಗೂಗಲ್Google doodleMahadevi Varmaಮಹಾದೇವಿ ವರ್ಮಾಸ್ವಾತಂತ್ರ್ಯ ಹೋರಾಟಗಾರ್ತಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


