ಬ್ಯಾಂಕ್ ಗೆ ವಂಚನೆ: ವಡೋದರಾ ಮೂಲದ ಡಿಪಿಐಎಲ್ ನ 1,122 ಕೋಟಿ ರೂ. ಮೌಲ್ಯದ ಆಸ್ತಿ ಇ.ಡಿ ವಶಕ್ಕೆ
ಬ್ಯಾಂಕ್ ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ 1,122 ಕೋಟಿ ರೂಪಾಯಿ ಮೌಲ್ಯದ

Published On :
ನವದೆಹಲಿ: ಬ್ಯಾಂಕ್ ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ವಡೋದರಾ ಮೂಲದ ಡೈಮಂಡ್ ಪವರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಡಿಪಿಐಎಲ್) ಸಮೂಹ ಸಂಸ್ಥೆಗಳಿಗೆ ಸಂಬಂಧಿಸಿದ 1,122 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಪಡೆದಿದೆ.
ಡಿಪಿಐಎಲ್ ವಿರುದ್ಧ ಬ್ಯಾಂಕ್ ಗಳಿಗೆ 2,654 ಕೋಟಿ ರೂಪಾಯಿ ವಂಚನೆ ಮಾಡಿರುವ ಆರೋಪವಿದ್ದು, ಸಿಬಿಐ ಎಫ್ಐ ಆರ್ ನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ಅಕ್ರಮ ಹಣಾ ವರ್ಗಾವಣೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಅಷ್ಟೇ ಅಲ್ಲದೇ ಕಳೆದ ತಿಂಗಳು ಸಂಸ್ಥೆಗೆ ಸೇರಿದ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆಯನ್ನೂ ನಡೆಸಿತ್ತು.
ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿರುವ ಆಸ್ತಿಗಳ ಪೈಕಿ ಡಿಪಿಐಎಲ್ ನ ಸಹ ಸಂಸ್ಥೆಗಳಾದ ಡೈಮಂಡ್ ಪವರ್ ಟ್ರಾನ್ಸ್ಫಾರ್ಮರ್ ಲಿಮಿಟೆಡ್, ಡೈಮಂಡ್ ಪ್ರಾಜೆಕ್ಟ್ಸ್ ಲಿಮಿಟೆಡ್, ಮೈಫೇಸ್ ಲೀಸರ್ಸ್ ಹಾಗೂ ನಾರ್ಥ್ ವೇ ಸ್ಪೇಸಸ್ ಸಂಸ್ಥೆಗಳಿಗೆ ಸೇರಿದ ಆಸ್ತಿ ಹಾಗೂ ವಿಂಡ್ ಮಿಲ್, ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಸಹ ಸೇರಿದೆ.
" ಡಿಪಿಐಎಲ್ ಗೆ ಸೇರಿದ ಘಟಕ, ಭುಜ್ ನಲ್ಲಿರುವ ಮೂರು ವಿಂಡ್ ಮಿಲ್, ಸಂಸ್ಥೆಯ ಪ್ರಮೋಟರ್ ಗಳಾದ ಭಟ್ನಾಗರ್ ಕುಟುಂಬದ ಫ್ಲಾಟ್ ಗಳು, ಇನ್ನೂ ಮಾರಾಟವಾಗಬೇಕಿದ್ದ ಫ್ಲಾಟ್, ನಿರ್ಮಾಣ ಹಂತದಲ್ಲಿದ್ದ ಹೋಟೆಲ್ ಗಳು ಹಾಗೂ ಡಿಪಿಐಎಲ್ ಗೆ ಸೇರಿದ ಭೂಮಿಯನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಡಿಪಿಐಎಲ್ ತನಗೆ ಸಂಬಂಧಿಸಿದ ಸಂಸ್ಥೆಗಳ ಮೂಲಕ ಅಕ್ರಮವಾಗಿ ಲೆಟರ್ ಆಫ್ ಕ್ರೆಡಿಟ್ ಪಡೆದು ಬ್ಯಾಂಕ್ ಗಳಿಗೆ ಸುಮಾರು 2,654 ಕೋಟಿ ರೂಪಾಯಿ ವಂಚನೆ ಮಾಡಿತ್ತು. ಅಷ್ಟೆ ಅಲ್ಲದೇ ಈ ರೀತಿ ಬ್ಯಾಂಕ್ ಗಳಿಂದ ಪಡೆದ ಹಣವನ್ನು ನಾರ್ಥ್ ವೇ ಸ್ಪೇಸಸ್ ಹಾಗೂ ಮೈಫೇರ್ ಲೀಸರ್ಸ್ ರೀತಿಯ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ತೊಡಗಿಸಿತ್ತು. ಸಂಸ್ಥೆಯ ವಹಿವಾಟಿನಲ್ಲೂ ಪಾರದರ್ಶಕತೆ ಇರಲಿಲ್ಲ. ಡೈಮಂಡ್ ಗ್ರೂಪ್ ಆಫ್ ಸಂಸ್ಥೆಗಳ ವಹಿವಾಟುಗಳೂ ನಕಲಿಯಾಗಿದ್ದವು ಇವುಗಳ ಪರಿಣಾಮವಾಗಿ ಸಂಸ್ಥೆ ಬ್ಯಾಂಕ್ ಗಳಿಗೆ 2654.40 ರೂಗಳ ಸುಸ್ತಿದಾರನಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


