ಪ.ಬಂಗಾಳ: 2ನೇ ತರಗತಿಯ 4 ಬಾಲಕಿಯರ ಮೇಲೆ ಶಿಕ್ಷಕನಿಂದ ಶಾಲೆಯಲ್ಲೇ ಅತ್ಯಾಚಾರ
ಶಾಲೆ ಮುಗಿದ ನಂತರ ಕಾಮುಕ ಶಿಕ್ಷಕನೊಬ್ಬ ಎರಡನೇ ತರಗತಿಯ ನಾಲ್ವರು ಬಾಲಕಿಯರ ಮೇಲೆ ದಿನಾ ಒಬ್ಬರಂತೆ...

Published On :
ರಾಯ್ ಗಂಜ್: ಶಾಲೆ ಮುಗಿದ ನಂತರ ಕಾಮುಕ ಶಿಕ್ಷಕನೊಬ್ಬ ಎರಡನೇ ತರಗತಿಯ ನಾಲ್ವರು ಬಾಲಕಿಯರ ಮೇಲೆ ದಿನಾ ಒಬ್ಬರಂತೆ ನಾಲ್ಕು ದಿನ ಶಾಲಾ ಕೊಠಡಿಯಲ್ಲೇ ಅತ್ಯಾಚಾರ ಎಸಗಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ ದಿನಜ್ ಪುರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಓರ್ವ ಬಾಲಕಿ ಶಾಲೆ ಹೋಗಲು ನಿರಾಕರಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ 35 ವರ್ಷದ ವಿವಾಹಿತ ಶಿಕ್ಷಕ ತಲೆಮರೆಸಿಕೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ.
ಇಬ್ಬರು ಬಾಲಕಿಯರ ಮೇಲೆ ಶಿಕ್ಷಕ ನಿರಂತರ ನಾಲ್ಕು ದಿನ ಅತ್ಯಾಚಾರ ಎಸಗಿದ್ದು, ಘಟನೆ ಬಾಯಿಬಿಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಹೆದರಿಸಿರುವುದಾಗಿ ಆರೋಪಿಸಲಾಗಿದೆ.
ಶಾಲೆಗೆ ಏಕೆ ಹೋಗುವುದಿಲ್ಲ ಎಂದು ಬಾಲಕಿಯನ್ನು ಪೋಷಕರು ಪ್ರಶ್ನಿಸಿದಾಗ, ಕಾಮುಕ ಶಿಕ್ಷಕನ ಕೃತ್ಯ ಬಾಯಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ನಿನ್ನೆ ರಾತ್ರಿ ರಾಯ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಬಾಲಕಿಯರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


