ದೇಶ

ಕರ್ನಾಟಕದ ವೈದ್ಯನಿಂದ 2 ವರ್ಷಗಳ ಕಾಲ ನನ್ನ ಮೇಲೆ ಅತ್ಯಾಚಾರ: ಪ್ರಮುಖ ಕ್ರೀಡಾಪಟು ಆರೋಪ

ತನ್ನ ಮೇಲೆ ಕರ್ನಾಟಕದ ವೈದ್ಯರೊಬ್ಬರು ಸತತ ಎರಡು ವರ್ಷಗಳ ಕಾಲ...

ಕರ್ನಾಟಕದ ವೈದ್ಯನಿಂದ 2 ವರ್ಷಗಳ ಕಾಲ ನನ್ನ ಮೇಲೆ ಅತ್ಯಾಚಾರ: ಪ್ರಮುಖ ಕ್ರೀಡಾಪಟು ಆರೋಪ
ಸಾಂದರ್ಭಿಕ ಚಿತ್ರ
Published On :

ಕೊಲ್ಹಾಪುರ: ತನ್ನ ಮೇಲೆ ಕರ್ನಾಟಕದ ವೈದ್ಯರೊಬ್ಬರು ಸತತ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾಪಟು ಯುವತಿ ಆರೋಪಿಸಿದ್ದಾರೆ.

ಕರ್ವೀರ್ ಪೊಲೀಸ್ ಠಾಣೆಯ ತನಿಖಾಧಿಕಾರಿ ದಿಲೀಪ್ ಟಿಬಿಲೆ ಈ ವಿಷಯವನ್ನು ದೃಢಪಡಿಸಿದ್ದು ಉತ್ತರ ಕರ್ನಾಟಕದ ಗುಲ್ಬರ್ಗ ಪಟ್ಟಣದಲ್ಲಿ ವಾಸಿಸುತ್ತಿರುವ ವೈದ್ಯರ ವಿರುದ್ಧ ಕ್ರೀಡಾಮಹಿಳೆಯ ವಿರುದ್ಧ ದೂರು ನೀಡಿದ್ದಾರೆ.

ತನ್ನ ಮೇಲೆ ವೈದ್ಯರು ಸತತ ಎರಡು ವರ್ಷಗಳ ಕಾಲ ಅತ್ಯಾಚಾರ ಮಾಡಿದ್ದು ಮದುವೆಯಾಗುತ್ತೇನೆ ಎಂದು ನನ್ನನ್ನು ನಂಬಿಸಿ ಮೋಸ ಮಾಡಿದರು ಎಂದು ಆರೋಪಿಸಿದ್ದಾರೆ. ಇದೀಗ ಆರೋಪಿ ವೈದ್ಯರು ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

2016ರ ಡಿಸೆಂಬರ್ ನಲ್ಲಿ ಫೇಸ್ ಬುಕ್ ಮೂಲಕ ವೈದ್ಯರ ಪರಿಚಯವಾಯಿತು ನಂತರ ನನ್ನನ್ನು ಕೊಲ್ಲಾಪುರದಲ್ಲಿ ಭೇಟಿ ಮಾಡುತ್ತಿದ್ದರು. ನಂತರ ಮದುವೆ ಪ್ರಸ್ತಾಪ ಮಾಡಿದಾಗ ವೈದ್ಯರು, ವಿದ್ಯಾವಂತರೆಂದು ಒಪ್ಪಿಕೊಂಡೆ. ಮಾರ್ಚ್ ವರೆಗೆ ನನ್ನನ್ನು ಬೆಂಗಳೂರು ಮತ್ತು ಗೋವಾಕ್ಕೆ ಹಲವು ಬಾರಿ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಂತರ ಮದುವೆಯಾಗೋಣವೆಂದು ಕೇಳಿದಾಗ ವಾಗ್ವಾದ ಶುರುಮಾಡಿದರು. ಇದರಿಂದ ಆಘಾತಕ್ಕೊಳಗಾಗಿ ಪೊಲೀಸರಿಗೆ ದೂರು ಸಲ್ಲಿಸಿದೆ. ಪೊಲೀಸರಿಗೆ ದೂರು ನೀಡಿದರೆ ತಕ್ಕ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಕೂಡ ಅವರು ನನಗೆ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಹೇಳಿದ್ದಾರೆ.

ಕೊಲ್ಹಾಪುರ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿ ಆರೋಪಿ ವೈದ್ಯನಿಗೆ ಹುಡುಕಾಟ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.