ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿ: ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಒಪ್ಪಿಗೆ
ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿಗೆ ಅವಕಾಶ ಕಲ್ಪಿಸುವ 2018ರ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ನವದೆಹಲಿ : ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿಗೆ ಅವಕಾಶ ಕಲ್ಪಿಸುವ 2018ರ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ಇಂದು ನಡೆದ ಸಚಿವ ಸಂಪುಟದಲ್ಲಿ ಈ ಸುಗ್ರೀವಾಜ್ಞೆಗೆ ಸಮ್ಮತಿ ನೀಡಲಾಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ದೇಶ ಬಿಟ್ಟು ಹೋಗುವ ಸುಸ್ತಿದಾರರ ಮಸೂದೆಯನ್ನು ಲೋಕಸಭೆಯಲ್ಲಿ ಮಾರ್ಚ್ 12 ರಂದು ಮಂಡಿಸಲಾಗಿತ್ತು. ಆದರೆ. ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಸತ್ತಿನ ಕಾರ್ಯಕಲಾಪ ನಡೆಯದ ಹಿನ್ನೆಲೆಯಲ್ಲಿ ಮಸೂದೆ ಅನುಮೋದನೆಯಾಗಿರಲಿಲ್ಲ.
ಈ ಸುಗ್ರೀವಾಜ್ಞೆಯಿಂದ ನೀರವ್ ಮೋದಿ ತರಹದ ದೇಶ ಬಿಟ್ಟು ಹೋಗುವ ಸುಸ್ತಿದಾರರ ಆಸ್ತಿ ಜಪ್ತಿ ಮಾಡಿಕೊಳ್ಳಲು ನೆರವಾಗಲಿದೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಈ ಸುಗ್ರೀವಾಜ್ಞೆ ಜಾರಿಗೆ ಬರಲಿದೆ.
100 ಕೋಟಿ ರೂ. ಮೊತ್ತದ ಬ್ಯಾಂಕ್ ಸಾಲ ಪಡೆದು ಮರುಪಾವತಿಸದ ವ್ಯಕ್ತಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಲು ಈ ಸುಗ್ರೀವಾಜ್ಞೆಯಲ್ಲಿ ವಿನಾಯಿತಿ ಇದೆ. ಅಲ್ಲದೇ ಆರೋಪಿಯ ಗಮನಕ್ಕೆ ಬಾರದೆ ಆತನ ಆಸ್ತಿ ಪಾಸ್ತಿ ಜಪ್ತಿ ಮಾಡಬಹುದಾಗಿದೆ.
ಹಣ ವರ್ಗಾವಣೆ ಕಾಯ್ದೆ -ಪಿಎಂಎಲ್ ಎ ಅಡಿಯಲ್ಲಿ ಇಂತಹ ಸುಸ್ತಿದಾರನ್ನು ತಡೆಗಟ್ಟಬಹುದು , ನಕಲಿ ಛಾಪಾ ಕಾಗದ, ನಗದು, ಹಣ ವರ್ಗಾವಣೆ ,ಮತ್ತಿತರ ಅಪರಾಧವೆಸಗುವ ವ್ಯಕ್ತಿಗಳ ವಿರುದ್ಧ ಬಂಧನ ವಾರೆಂಟ್ ಹೊರಡಿಸಬಹುದಾಗಿದೆ.
ಸುಸ್ತಿದಾರರು ದೇಶ ಬಿಟ್ಟು ಹೋಗದಂತೆ ತಡೆಗಟ್ಟಿ ಕಾನೂನು ಕ್ರಮ ಜರುಗಿಸಬಹುದಾಗಿದೆ. ಅಲ್ಲದೇ ಬೇನಾಮಿ ಆಸ್ತಿಪಾಸ್ತಿ ಅಥವಾ ವಿದೇಶದಲ್ಲಿ ಹೊಂದಿರುವ ಆಸ್ತಿ ಬಗ್ಗೆಗೂ ಮಾಹಿತಿ ಪಡೆಯಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


