ದೇಶ

ಇ-ಫೈಲಿಂಗ್ ಗಾಗಿ ಐಟಿ ರಿಟರ್ನ್-1 ಫಾರ್ಮ್ ಸಿದ್ಧವಾಗಿದೆ: ಐಟಿ ಇಲಾಖೆ

ವೇತನ ಪಡೆಯುವ ತೆರಿಗೆದಾರರಿಗಾಗಿ ಇತ್ತೀಚಿಗೆ ವಿನೂತನ ಐಟಿ ರಿಟರ್ನ್-1 ಫಾರ್ಮ್ ನ್ನು ಸಿದ್ಧಪಡಿಸಲಾಗಿದ್ದು, ಅದನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್ ನಲ್ಲಿ ಇಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಇ-ಫೈಲಿಂಗ್ ಗಾಗಿ ಐಟಿ ರಿಟರ್ನ್-1 ಫಾರ್ಮ್ ಸಿದ್ಧವಾಗಿದೆ: ಐಟಿ ಇಲಾಖೆ
ಸಾಂದರ್ಭಿಕ ಚಿತ್ರ
Published On :

ನವದೆಹಲಿ : ವೇತನ ಪಡೆಯುವ  ತೆರಿಗೆದಾರರಿಗಾಗಿ ಇತ್ತೀಚಿಗೆ ವಿನೂತನ ಐಟಿ ರಿಟರ್ನ್-1 ಫಾರ್ಮ್ ನ್ನು ಸಿದ್ಧಪಡಿಸಲಾಗಿದ್ದು, ಅದನ್ನು   ಆದಾಯ ತೆರಿಗೆ ಇಲಾಖೆಯ  ಅಧಿಕೃತ ಪೋರ್ಟಲ್ ನಲ್ಲಿ ಇಡಲಾಗಿದೆ   ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಏಪ್ರಿಲ್.5 ರಂದು ಸಿಬಿಡಿಟಿಯಿಂದ ಏಕ  ಆದಾಯ ತೆರಿಗೆ  ಫಾರ್ಮ್  ನ್ನು ಸಿದ್ಧಪಡಿಸಲಾಗಿದ್ದು,  ವೆಬ್ ಸೈಟ್. https://www.​incometaxindiaefiling.gov.in ನಲ್ಲಿ ನಿನ್ನೆ ಇಡಲಾಗಿದೆ .ಮತ್ತೊಂದು ಐಟಿ  ರಿಟರ್ನ್ಸ್   ಫಾರ್ಮ್ಸ್  ಶೀಘ್ರದಲ್ಲಿಯೇ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.

2019-19ರ ಆರ್ಥಿಕ ವರ್ಷದಲ್ಲಿ ವೇತನದಾರರ  ವೇತನ ಕಡಿತ,  ಆದಾಯ, ಮತ್ತು ವ್ಯಾಪಾರಿಗಳಿಗೆ ಜಿಎಸ್ ಟಿ ನಂಬರ್  ಒದಗಿಸಲು   ಹೊಸ ಐಟಿ ಫಾರ್ಮ್ಸ್  ಕಡ್ಡಾಯಗೊಳಿಸಲಾಗಿದೆ.

ವಿನೂತನ ಐಟಿ ರಿಟರ್ನ್-1 ಫಾರ್ಮ್ ನಲ್ಲಿ  ವಿವೇಚನಾಶೀಲತೆಯಿಂದ ಕೆಲವೊಂದು ಕ್ಷೇತ್ರಗಳನ್ನು ಇಡಲಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಫೈಲಿಂಗ್ ನಲ್ಲಿ ಅಂತಹ ಯಾವುದೇ ಬದಲಾವಣೆ ಇರುವುದಿಲ್ಲ ಎಂದು  ಅವರು ಹೇಳಿದ್ದಾರೆ.

ಕೆಲ ತೆರಿಗೆದಾರರನ್ನು ಹೊರತುಪಡಿಸಿದರೆ ಎಲ್ಲಾ ಏಳು ಐಟಿ ರಿಟರ್ನ್ ಫಾರ್ಮ್ಸ್  ವಿದ್ಯುನ್ಮಾನವಾಗಿಯೇ   ತುಂಬಬೇಕಾಗುತ್ತದೆ.  ಐಟಿ ರಿಟರ್ನ್-1  ಅಥವಾ ಸಹಜ್  ಅನ್ನು ವೇತನದಾರ ತೆರಿಗೆದಾರರು ಮಾತ್ರ ಫೈಲಿಂಗ್ ಮಾಡಬೇಕಾಗುತ್ತದೆ.

ವೇತನದಾರರ ವೇತನ ಕಡಿತ ಹಿಂಪಡೆಯುವಿಕೆ,  ವಿನಾಯಿತ ಸಂಬಂಧ ಪ್ರತ್ಯೇಕ ವಲಯದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ. ಫಾರ್ಮ್ 16 ಬಗ್ಗೆಯೂ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

50 ಲಕ್ಷ ರೂ.ವರೆಗೂ ಆದಾಯ ಹೊಂದಿರುವ ನಾಗರಿಕರು  ಐಟಿ ರಿಟರ್ನ್-1 ಫಾರ್ಮ್ ಫೈಲಿಂಗ್ ಮಾಡಬಹುದೆಂದು ಸಿಬಿಡಿಟಿ ಹೇಳಿದೆ. ಮನೆ, ಆಸ್ತಿಯಿಂದ ಬರುವ ಆದಾಯವನ್ನು ಕಡ್ಡಾಯಗೊಳಿಸಲಾಗಿದ್ದು, ಫಾರ್ಮ್ಸ್ 16 ನಲ್ಲಿ ವೇತನ ಹಾಗೂ ಮನೆ ಆಸ್ತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲಾಗಿದೆ.ಆದಾಯ ತೆರಿಗೆ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.