ಗುಜರಾತ್ ನಲ್ಲಿ ಭೀಕರ ಅಪಘಾತ: 7 ಮಹಿಳೆಯರು ಸೇರಿ 10 ಮಂದಿ ಸಾವು
ಗುಜರಾತ್ ಕಚ್ ಜಿಲ್ಲೆಯ ಶಿಕ್ರಾ ಗ್ರಾಮದ ಬಳಿ ಭಾನುವಾರ ಟ್ರಾಕ್ಟರ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ...

Published On :
ಗಾಂಧಿಧಾಮ: ಗುಜರಾತ್ ಕಚ್ ಜಿಲ್ಲೆಯ ಶಿಕ್ರಾ ಗ್ರಾಮದ ಬಳಿ ಭಾನುವಾರ ಟ್ರಾಕ್ಟರ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಏಳು ಮಹಿಳೆಯರು ಸೇರಿದಂತೆ 10 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಒಂದೇ ಕುಟುಂಬಕ್ಕೆ ಸೇರಿದ ಸುಮಾರು 25 ಮಂದಿ ಟ್ರಾಕ್ಟರ್ ನಲ್ಲಿ ಮದುವೆಗೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ಸೊಂದು ಡಿಕ್ಕಿ ಹೊಡೆದಿದೆ ಎಂದು ಭಚುವ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಾಕ್ಟರ್ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸುತ್ತಿದ್ದಂತೆ ಗಾಂಧಿಧಾಮದಿಂದ ಕುಂಭರಡಿಗೆ ತೆರಳುತ್ತಿದ್ದ ಬಸ್ ಡಿಕ್ಕೆ ಹೊಡೆದ ಪರಿಣಾಮ 10 ವರ್ಷದ ಓರ್ವ ಬಾಲಕ ಸೇರಿದಂತೆ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರನ್ನು ಕಂಕುಬೆನ್ ಅನವಾಡಿಯಾ(60), ಪಮಿಬೆನ್ ಅನವಾಡಿಯಾ(55), ಜಿಗ್ಯಾಬೆನ್ ಅನವಾಡಿಯಾ (25), ದಯಾಬೆನ್ ಅನವಾಡಿಯಾ(35), ಮನಬೆನ್ ಅನವಾಡಿಯಾ(50), ನಿಶಾಬೆನ್ ಅನವಾಡಿಯಾ (17), ರಮಾಬೆನ್ ಅನವಾಡಿಯಾ(60), ಕಿಶೋರ್ ಅನವಾಡಿಯಾ (10), ವಿಶಾಲ್ ಅನವಾಡಿಯಾ (20) ಎಂದು ಗುರುತಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


