ಅಮೇಥಿ: ಆಸ್ತಿ ವಿವಾದ, ಸೋದರ ಸಂಬಂಧಿಯಿಂದ ಮಹಿಳೆ, ಮಗಳ ಸಜೀವ ದಹನ
ಆಸ್ತಿ ವಿವಾದ ಸಂಬಂಧ ಮಹಿಳೆ ಹಾಗೂ ಆಕೆಯ ಮಗಳನ್ನು ಸಜೀವ ದಹನ ಮಾಡಿರುವ ಘಟನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಹಳ್ಳಿಯೊಂದರಲ್ಲಿ ನಡೆದಿದೆ.

Published On :
ಲಖನೌ(ಉತ್ತರ ಪ್ರದೇಶ): ಆಸ್ತಿ ವಿವಾದ ಸಂಬಂಧ ಮಹಿಳೆ ಹಾಗೂ ಆಕೆಯ ಮಗಳನ್ನು ಸಜೀವ ದಹನ ಮಾಡಿರುವ ಘಟನೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ವಕ್ಷೇತ್ರ ಅಮೇಥಿಯ ಹಳ್ಳಿಯೊಂದರಲ್ಲಿ ನಡೆದಿದೆ.
ಅಮೀನಾ (45) ಮತ್ತು ಆಕೆಯ ಮಗಳು ಅಫ್ರೀನ್ (18) ಗೆ ಅವರ ಸೋದರ ಸಂಬಂಧಿ ಬೆಂಕಿ ಹಚ್ಚಿ ಕೊಂದು ಹಾಕಿದ್ದಾರೆ ಎಂದು ಫರ್ಸತ್ ಗಂಜ್ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿ ಆರ್.ಕೆ. ಸಿಂಗ್ ಹೇಳಿದರು.
ಅಮೀನಾ ಅವರ ಪತಿ ಈ ದುಷ್ಕೃತ್ಯ ಎಸಗಿದ ಅಪರಾಧಿಯ ಸಹೋದರರಾಗಿದ್ದು ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದ ತನ್ನ ಪತ್ನಿ ಮತ್ತು ಮಗಳನ್ನು ಉಳಿಸಿಕೊಳ್ಳೌ ಪ್ರಯತ್ನ ನಡೆಸಿದ್ದರು. ಈ ಹಂತದಲ್ಲಿ ಅವರಿಗೆ ಸಹ ಬೆಂಕಿಂದಾಗಿ ದೇಹದ ಕೆಲ ಭಾಗಗಳು ಸುಟ್ಟವು.
ಆಸ್ತಿ ವಿಚಾರವಾಗಿ ಇಬ್ಬರೂ ಸೋದರರ ನಡುವೆ ಕೆಲ ಕಾಲದಿಂದ ಜಗಳ ನಡೆಯುತ್ತಿತ್ತೆಂದು ಸ್ಥಳೀಯ ಮೂಲಗಳು ತಿಳಿಸಿದೆ.
ಸದ್ಯ ಸುಟ್ಟ ಗಾಯಗಳಾಗಿರುವ ಮೂವರನ್ನೂ ರೀ ಬರೇಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ತಾಯಿ, ಮಗಳು ಇದಾಗಲೇ ಮೃತಪಟ್ಟಿದ್ದು ಅಮೀನ ಅವರ ಪತಿ ಮಾತ್ರ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ ಎಂದು ಪೋಲೀಸರು ಹೇಳಿದರು.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


