2019 ಲೋಕಸಭಾ ಚುನಾವಣೆ ಇಸ್ಲಾಂ-ಭಗವಾನ್, ಪಾಕ್-ಭಾರತ ನಡುವಣ ಹಣಾಹಣಿ: ಬಿಜೆಪಿ ಶಾಸಕ
2019ರ ಲೋಕಸಭಾ ಚುನಾವಣೆಯಲು ಇಸ್ಲಾಂ ವಿರುದ್ಧ ಭಗವಾನ್, ಪಾಕಿಸ್ತಾನ ವಿರುದ್ಧ ಭಾರತ ಆಧಾರದಲ್ಲಿ ನಡೆಯಲಿದೆ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ...

Published On :
ಬಲಿಯಾ: 2019ರ ಲೋಕಸಭಾ ಚುನಾವಣೆಯಲು ಇಸ್ಲಾಂ ವಿರುದ್ಧ ಭಗವಾನ್, ಪಾಕಿಸ್ತಾನ ವಿರುದ್ಧ ಭಾರತ ಆಧಾರದಲ್ಲಿ ನಡೆಯಲಿದೆ ಎಂದು ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ಶನಿವಾರ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ಅವರನ್ನು ಸಮರ್ಥಿಸಿಕೊಂಡಿದ್ದ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.
ಮೂವರು ಮಕ್ಕಳ ತಾಯಿಯ ಮೇಲೆ ಯಾರು ಅತ್ಯಾಚಾರ ನಡೆಸುತ್ತಾರೆ?... ಬಿಜೆಪಿ ಶಾಸಕ ಸೆಂಗರ್ ಅವರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು.
ಇದರಂತೆ ಗುರುವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಸುರೇಂದ್ರ ಸಿಂಗ್ ಅವರು, 2019ರ ಲೋಕಸಭಾ ಚುನಾವಣೆಯು ಪಾಕಿಸ್ತಾನ ವಿರುದ್ಧ ಭಾರತ ಮತ್ತು ಇಸ್ಲಾಂ ವಿರುದ್ಧ ಭಗವಾನ್ ಆಧಾರದಲ್ಲಿ ನಡೆಯಲಿದೆ. ಇಸ್ಲಾಂ ಗೆಲ್ಲುವುದೋ ಅಥವಾ ಭಗವಾನ್ ಗೆಲ್ಲುವುದೋ ಎನ್ನುವುದನ್ನು ದೇಶದ ಗೌರವಾನ್ವಿತ ಜನರಾದ ನೀವು ನಿರ್ಧರಿಸಬೇಕು. ಅಪ್ರಾಮಾಣೀಕರು ಗೆಲ್ಲುತ್ತಾರೋ ಅಥವಾ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾಮಾಣಿಕತೆಯೋ ಎನ್ನುವುದನ್ನು ನೀವು ನಿರ್ಧರಿಸಬೇಕೆಂದು ಹೇಳಿದ್ದಾರೆ.
ಈ ಬಾರಿ ಬಿಜೆಪಿ ಪಕ್ಷ ಗೆಲವು ಸಾಧಿಸಿದ್ದೇ ಆದರೆ ದೇಶದ ಜನತೆ ಸಂಭ್ರಮವನ್ನಾಚರಿಸಲಿದೆ ಮತ್ತು ಪ್ರತಿಪಕ್ಷವು ತನ್ನ ಸರ್ಕಾರವನ್ನು ರಚಿಸಲು ಸಮರ್ಥವಾದರೆ, ಪಾಕಿಸ್ತಾನದಲ್ಲಿ ವಿಜಭೇರಿಗಳು ಮೊಳಗಲಿದೆ ಎಂದು ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯು ಭಾರತ ಭರ್ತಿ ಮತ್ತು ವಿಭಾಜಕ ಶಕ್ತಿ (ವಿಭಕ್ತಿ)ನಡುವಿನ ಕದನವಾಗಲಿದೆ. ದೇಶದಲ್ಲಿ ಕೆಲವೇ ಮುಸ್ಲಿಮರು ದೇಶಪ್ರೇಮಿಗಳಾಗಿದ್ದಾರೆ. ಭಾರತವು ಹಿಂದೂ ರಾಷ್ಟ್ರವಾದ ಬಳಿರಕ ನಮ್ಮ ಸಂಸ್ಕೃತಿಯನ್ನು ಅನುಸರಿಸುವ ಮುಸ್ಲಿಮರು ಇಲ್ಲಿಯೇ ಇರುತ್ತಾರೆ. ಒಪ್ಪದವರು ಬೇರೆ ಯಾವುದೇ ರಾಷ್ಟ್ರದಲ್ಲಿ ಆಶ್ರಯ ಪಡೆಯಲು ಮುಕ್ತರಾಗಿರುತ್ತಾರೆಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿ2019 ಲೋಕಸಭಾ ಚುನಾವಣೆ2019 Lok Sabha pollsUnnao rape caseಉನ್ನಾವೋ ಅತ್ಯಾಚಾರ ಪ್ರಕರಣSurendra SinghIslam vs BhagwanPak vs Indiaಇಸ್ಲಾಂ-ಭಗವಾನ್ಪಾಕ್-ಭಾರತಸುರೇಂದ್ರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


