'ಕ್ಯಾಂಡಲ್ ಲೈಟ್ ಮಾರ್ಚ್' ವೇಳೆ ನೂಕುನುಗ್ಗಲು: ಜನಜಂಗುಳಿಯ ದುರ್ವರ್ತನೆಗೆ ಪ್ರಿಯಾಂಕಾ ವಾದ್ರಾ ಸಿಟ್ಟು
ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳ ವಿರುದ್ದ ಪ್ರತಿಭಟನೆ ನಡೆಸುವ ಸಲುವಾಗಿ ಗುರುವಾರ ಮಧ್ಯರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಕ್ಯಾಂಡಲ್ ಲೈಟ್ ಮಾರ್ಚ್' ವೇಳೆ ನೂಕುನುಗ್ಗಲು ಏರ್ಪಟ್ಟಿದ್ದು, ಇದಕ್ಕೆ ಪ್ರಿಯಾಂಕಾ ಅವರು...

Published On :
ನವದೆಹಲಿ: ಕತುವಾ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳ ವಿರುದ್ದ ಪ್ರತಿಭಟನೆ ನಡೆಸುವ ಸಲುವಾಗಿ ಗುರುವಾರ ಮಧ್ಯರಾತ್ರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದಿದ್ದ ಕ್ಯಾಂಡಲ್ ಲೈಟ್ ಮಾರ್ಚ್' ವೇಳೆ ನೂಕುನುಗ್ಗಲು ಏರ್ಪಟ್ಟಿದ್ದು, ಇದಕ್ಕೆ ಪ್ರಿಯಾಂಕಾ ಅವರು ತೀವ್ರವಾಗಿ ಕೆಂಡಾಮಂಡಲಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಪ್ರತಿಭಟನೆ ವೇಳೆ ಜನರು ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಅವರನ್ನೂ ತಳ್ಳಿದ್ದು, ಜನಜಂಗುಳಿಯ ಈ ದುರ್ವರ್ತನೆಗೆ ಪ್ರಿಯಾಂಕಾ ಅವರು ತೀವ್ರವಾಗಿ ಸಿಟ್ಟಿಗೆದ್ದಿದ್ದಾರೆ. ನಾವು ಯಾವ ಕಾರಣಕ್ಕಾಗಿ ಇಲ್ಲಿ ಸೇರಿದ್ದೇವೆಂಬುದನ್ನು ನೆನಪಿಟ್ಟುಕೊಂಡು ಸಂಯದಿಂದ ವರ್ತಿಸಿ ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ.
ತಳ್ಳಾಟ ನಡೆಸುತ್ತಿರುವವರು ತಮ್ಮ ಮನೆಗಳಿಗೆ ಹೋಗಬೇಕು. ಜನರು ಸ್ವಲ್ಪ ಸಂಯಮದಿಂದ ನಡೆದುಕೊಳ್ಳಿ, ಮೌನವಾಗಿ ಸಾಗಿ ಎಂದು ಸಿಟ್ಟಿನಿಂದ ಗುಡುಗಿದ್ದಾರೆಂದು ತಿಳಿದುಬಂದಿದೆ.
ಜಮ್ಮುವಿನ ಕತುವಾದಲ್ಲಿ ನಡೆದಿದ್ದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ, ಕೊಲೆ ಹಾಗೂ ಉತ್ತರಪ್ರದೇಶದ ಉನ್ನಾವೋದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ರಾಜಧಾನಿ ದೆಹಲಿಯ ಇಂಡಿಯಾ ಗೇಟ್ ಬಳಿ ತಡರಾತ್ರಿ ರಾಹುಲ್ ಗಾಂಧಿ ಸೇರಿ ಇನ್ನಿತರೆ ನಾಯಕರು ಕ್ಯಾಂಡಲ್ ಲೈಟ್ ಮಾರ್ಚ್ ನಡೆಸಿದರು. ಈ ಪ್ರತಿಭಟನೆಯಲ್ಲಿ ಸಾಕಷ್ಟು ಜನರು ಭಾಗಿಯಾಗಿದ್ದರು.
ಈ ಜಾಥಾದಲ್ಲಿ ರಾಹುಲ್ ಆವರದೊಂದಿಗೆ ಪ್ರಿಯಾಂಕಾ ಹಾಗೂ ಅವರ ಪತಿ ರಾಬರ್ಟ್ ವಾದ್ರಾ ಅವರೂ ಕೂಡ ಸಾಥ್ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rahul Gandhiರಾಹುಲ್ ಗಾಂಧಿPriyanka VadraMidnight candle light vigilಮಧ್ಯರಾತ್ರಿ ಕ್ಯಾಂಡಲ್ ಲೈಟ್ ಮಾರ್ಚ್ಪ್ರಿಯಾಂಕಾ ವಾದ್ರಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


