ದೇಶ

ಕಾವೇರಿ ವಿವಾದ: ತಮಿಳುನಾಡಿಗೆ ನ್ಯಾಯ ಒದಗಿಸಿ- ಪ್ರಧಾನಿ ಮೋದಿಗೆ ಕಮಲ್ ಹಾಸನ್

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಕ್ಕೆ ನ್ಯಾಯ ಒದಗಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಟ ಹಾಗೂ ರಾಜಕೀಯ ನಾಯಕ ಕಮಲ್ ಹಾಸನ್...

ಕಾವೇರಿ ವಿವಾದ: ತಮಿಳುನಾಡಿಗೆ ನ್ಯಾಯ ಒದಗಿಸಿ- ಪ್ರಧಾನಿ ಮೋದಿಗೆ ಕಮಲ್ ಹಾಸನ್
ಕಮಲ್ ಹಾಸನ್
Published On :
ಚೆನ್ನೈ; ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡು ರಾಜ್ಯಕ್ಕೆ ನ್ಯಾಯ ಒದಗಿಸಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ನಟ ಹಾಗೂ ರಾಜಕೀಯ ನಾಯಕ ಕಮಲ್ ಹಾಸನ್ ಅವರು ಗುರುವಾರ ಹೇಳಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಬಹಿರಂಗ ಪತ್ರ ಬರೆದಿರುವ ಅವರು, ಕಾವೇರಿ ನದಿ ನೀರು ವಿವಾದ ಸಂಬಂಧ ತಮಿಳುನಾಡಿನಲ್ಲಿ ಉದ್ಭವಿಸಿರುವ ಸಮಸ್ಯೆ ಕುರಿತಂತೆ ನಿಮಗೆ ಮಾಹಿತಿ ಎಂದು ನನಗೆ ವಿಶ್ವಾಸವಿದೆ. ನರ್ಮದಾ ನದಿ ನೀರು ಮಂಡಳಿ ಸಂದರ್ಭದಲ್ಲಿ ಸುಲಭವಾಗಿ ನ್ಯಾಯ ಒದಗಿಸಿದ್ದಿರಿ. ನಿಮ್ಮ ಹಿಂದಿನ ಅನುಭವವನ್ನು ನಾನು ನಂಬುತ್ತೇನೆ. 
ಕರ್ನಾಟಕ ರಾಜ್ಯದಲ್ಲಿ ಮೇ.12ಕ್ಕೆ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕಾವೇರಿ ವಿವಾದ ಬಗೆಹರಿಯುವುದು ವಿಳಂಬವಾಗುತ್ತದೆ ಎಂದು ರಾಜ್ಯದ ಜನತೆ ಹೇಳುತ್ತಿದ್ದಾರೆ. ಈ ನಂಬಿಕೆಗಳು ಹಾಗೂ ಊಹಾಪೋಹಳು ಸುಳ್ಳಾಗಲಿ ಎಂದು ನಾನು ಬಯಸುತ್ತೇನೆ. ಚುನಾವಣೆಗಿಂತಲೂ ಜನತೆ ಅತ್ಯಂತ ಮುಖ್ಯವಾದವರು. ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ, ತಮಿಳುನಾಡಿಗೆ ನ್ಯಾಯ ಒದಗಿಸಿಕೊಂಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಕೂಡಲೇ ರಚನೆ ಮಾಡುವ ಮೂಲಕ ಜನತೆ ಮತ್ತು ತಮಿಳುನಾಡು ರಾಜ್ಯ ರೈತರ ಕಡೆಗಿರುವ ನಿಮ್ಮ ಕರ್ತವ್ಯವವನ್ನು ನೀವು ಪೂರ್ಣಗೊಳಿಸುತ್ತೀರೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.