ಉನ್ನಾವೊ ಅತ್ಯಾಚಾರ: ರಾಹುಲ್ ರಿಂದ ಮಧ್ಯರಾತ್ರಿ ಮೇಣದಬತ್ತಿ ಹಿಡಿದು ಪ್ರತಿಭಟನೆ
ದೇಶವು ತನ್ನ ಮಹಿಳೆಯ ಮೇಲಾಗುವ ಅನಾಚಾರವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕಥುವಾ ಹಾಗು ಉನ್ನಾವೊ ಅತ್ಯಾಚಾರ ಪ್ರಕರಣ ವಿರೋಧಿಸಿ ತಾವು ಮಧ್ಯರಾತ್ರಿ ವೇಳೆ ............

Published On :
ನವದೆಹಲಿ: ದೇಶವು ತನ್ನ ಮಹಿಳೆಯ ಮೇಲಾಗುವ ಅನಾಚಾರವನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ. ಕಥುವಾ ಹಾಗು ಉನ್ನಾವೊ ಅತ್ಯಾಚಾರ ಪ್ರಕರಣ ವಿರೋಧಿಸಿ ತಾವು ಮಧ್ಯರಾತ್ರಿ ವೇಳೆ ಇಂಡಿಯಾ ಗೇಟ್ ಬಳಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಪ್ರತಿಭಟನೆಯಲ್ಲಿ ದೆಹಲಿಯ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜತೆಯಾಗಲಿದ್ದಾರೆ.
"ಲಕ್ಷಾಂತರ ಭಾರತೀಯರಂತೆಯೇ ನನ್ನ ಹೃದಯ ಸಹ ಈ ರಾತ್ರಿ ಮರುಗುತ್ತದೆ. ಭಾರತವು ತನ್ನ ಮಹಿಳೆಯರ ಮೇಲಾಗುತ್ತಿರುವ ಅನಾಚಾರಗಳನ್ನು ಸಹಿಸಿಕೊಂಡಿರಲು ಸಾಧ್ಯವಿಲ್ಲ.
"ಹಿಂಸಾಚಾರವನ್ನು ಪ್ರತಿಭಟಿಸಲು, ನ್ಯಾಯಕ್ಕಾಗಿ ಒತ್ತಾಯಿಸಲು ಈ ದಿನ ಮಧ್ಯರಾತ್ರಿ ಇಂಡಿಯಾ ಗೇಟ್ ಬಳಿ ಮೌನ, ಶಾಂತಿಯುತ ಮೇಣದಬತ್ತಿ ಪ್ರತಿಭಟನೆಯಲ್ಲಿ ನನ್ನನ್ನು ಕೂಡಿಕೊಳ್ಳಿ" ರಾಹುಲ್ ಟ್ವೀಟ್ ಮಾಡಿದ್ದಾರೆ.
ಈ ಮಧ್ಯರಾತ್ರಿ 12 ಗಂಟೆಗೆ ಡಿಪಿಸಿಸಿ ಕಚೇರಿಯಿಂದ ಇಂಡಿಯಾ ಗೇಟ್ ವರೆಗೆ ಶಾಂತಿಯುತ ಮೇಣದಬತ್ತಿ ಹಿಡಿದು ಮೆರವಣಿಗೆ ನಡೆಸಲಾಗುವುದು ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕೆನ್ ಹೇಳಿದ್ದಾರೆ.
ಇದಕ್ಕೂ ಮುನ್ನ ಜಮ್ಮು ಕಾಶ್ಮೀರದ ಕಥುವಾ ದಲ್ಲಿ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿ ರಾಹುಲ್ ತೀವ್ರ ಆಘಾತ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್Rahul Gandhiರಾಹುಲ್ ಗಾಂಧಿUnnao rapeಉನ್ನಾವೊ ಅತ್ಯಾಚಾರcandlelight marchಮೇಣದಬತ್ತಿ ಮೆರವಣಿಗೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


