ದೇಶ

ಉನ್ನಾವೊ ಅತ್ಯಾಚಾರ ಸಂಸ್ತ್ರಸ್ತೆ ತಂದೆಯ ಮರಣದ ವಿರುದ್ಧವೂ ಪ್ರಧಾನಿ ಉಪವಾಸ ಮಾಡುವವರಿದ್ದಾರೆ: ರಾಹುಲ್ ವ್ಯಂಗ್ಯ

ಏ. 12ರಂದು ಪ್ರಧಾನಿ ಮೋದಿ ನಡೆಸಲು ಉದ್ದೇಶಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಹ ಕುರಿತು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಘಟಿಸಿದ ಉನ್ನಾವೊ.....

ಉನ್ನಾವೊ  ಅತ್ಯಾಚಾರ ಸಂಸ್ತ್ರಸ್ತೆ ತಂದೆಯ ಮರಣದ ವಿರುದ್ಧವೂ ಪ್ರಧಾನಿ ಉಪವಾಸ ಮಾಡುವವರಿದ್ದಾರೆ: ರಾಹುಲ್ ವ್ಯಂಗ್ಯ
ರಾಹುಲ್ ಗಾಂಧಿ
Published On :
ನವದೆಹಲಿ: ಏ. 12ರಂದು ಪ್ರಧಾನಿ ಮೋದಿ ನಡೆಸಲು ಉದ್ದೇಶಿಸಿರುವ ಒಂದು ದಿನದ ಉಪವಾಸ ಸತ್ಯಾಗ್ರಹಹ ಕುರಿತು ಟೀಕಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಘಟಿಸಿದ ಉನ್ನಾವೊ ಸಾಮೂಹಿಕ ಅತ್ಯಾಚಾರದ ಹತ್ಯೆಯ ಬಗ್ಗೆಯೂ ಅವರು ಉಪವಾಸ ನಡೆಸುತ್ತಾರೆ ಎಂದರು.
"ಉತ್ತರ ಪ್ರದೇಶದಲ್ಲಿ ನಡೆಸ ಅತ್ಯಾಚಾರ ಸಂತ್ರಸ್ತೆ ತಂದೆಯ ಮೇಲಿನ ದೌರ್ಜನ್ಯವು ಮಾನವೀತೆಗೆ ಭಂಗ ತರುವಂತಹುದಾಗಿದೆ. ಮಹಿಳೆಯ ವಿರುದ್ಧದ ದೌರ್ಜನ್ಯಗಳ ಬಗ್ಗೆ ಕೂಡ ಪ್ರಧಾನಿ ಶೀಘ್ರದಲ್ಲೇ ಉಪವಾಸ ನಡೆಸುತ್ತಾರೆ.ಎಂದು ನಾವು ಭಾವಿಸುತ್ತೇವೆ, ಬಿಜೆಪಿ ಆಳ್ವಿಕೆಯ ಅಡಿಯಲ್ಲಿ ಅನ್ಯಾಯ ಮತ್ತು ಅರಾಜಕತೆ ಹೆಚ್ಚುತ್ತಿದೆ " ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
 23 ದಿನಗಳ ಸಂಸತ್‌ ಕಲಾಪ ಸಂಪೂರ್ಣ ವ್ಯರ್ಥವಾಗಲು ಕಾರಣವಾದ ಪ್ರತಿಪಕ್ಷಗಳ ವಿರುದ್ಧ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಂಸದರು ನಡೆಸಲ್ಲ್ಲುದ್ದೇಶಿಸಿದ ಉಪವಾಸದಲ್ಲಿ ಪ್ರಧಾನಿ ಮೋದಿ ಸಹ ಭಾಗವಹಿಸಲಿದ್ದಾರೆ. ಅವರು ಗುರುವಾರ ಒಂದು ದಿನ ಉಪವಾಸ ನಡೆಸಲಿದ್ದಾರೆ.
ತನ್ನ ಮಗಳ ಮೇಲೆ ಉತ್ತರ ಪ್ರದೇಶ ಬಿಜೆಪಿ ಶಾಸಕ ಮತ್ತು ಸ್ನೇಹಿತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯ ತಂದೆ ಮುಖ್ಯಮಂತ್ರಿ ಯೋಹ್ಗಿ ಆದಿತ್ಯನಾಥ್ ಮನೆ ಎದುರು ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.  ಆಗ ಅವರನ್ನು ಪೋಲೀಸರು ಬಂಧಿಸಿದ್ದರು. ಹಾಗೆ ಪೋಲೀಸ್  ಕಸ್ಟಡಿಯಲ್ಲಿ  ಇರುವಾಗಲೇ ಆತ ನಿಧನರಾಗಿದ್ದರು.
 ಬಿಜೆಪಿ ಶಾಸಕ ಕುಲ್ದೀಪ್ ಸಿಂಗ್ ಸೇಂಗರ್ ಅವರು ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ  ಮಹಿಳೆಯ ಕುಟುಂಬ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಮುಂದಾದಾಗ ಸಂತ್ರಸ್ತೆಯ ತಣ್ದೆಯನ್ನು ಪೋಲೀಸರು ವಶಕ್ಕೆ ಪಡೆದಿದ್ದರು ಅಲ್ಲದೆ  ಶಾಸಕರ ಸಹಾಯಕರು, ಪೋಲೀಸರು ಅವರಿಗೆ ಮನಸೋ ಇಚ್ಚೆ ದಂಡಿಸಿದ್ದರು. 
ಸದ್ಯ ಪ್ರಕರಣ ಸಂಬಂಧ ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ಸ್ಥಾಪಿಸಿ ಸಂ<ತ್ರಸ್ತೆಯ ಆರೋಪಗಳ ಕುರಿತಂತೆ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.