ಬಿಜೆಪಿ ದೇಶದ ಶ್ರೀಮಂತ ರಾಷ್ಟ್ರೀಯ ಪಕ್ಷ, ಕಳೆದ ವರ್ಷದ ಆದಾಯ 1,034 ಕೋಟಿ!
ಭಾರತೀಯ ಜನತಾ ಪಕ್ಷ(ಬಿಜೆಪಿ) 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,034 ಕೋಟಿ ರುಪಾಯಿ ಆದಾಯ.....

Published On :
ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ) 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,034 ಕೋಟಿ ರುಪಾಯಿ ಆದಾಯ ಘೋಷಿಸಿಕೊಳ್ಳುವ ಮೂಲಕ ದೇಶದ ಅತ್ಯಂತ ಶ್ರೀಮಂತ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.
ದೇಶದ ಏಳು ರಾಷ್ಟ್ರೀಯ ಪಕ್ಷಗಳು ಒಟ್ಟು 1,559.17 ಕೋಟಿ ರುಪಾಯಿ ಆದಾಯ ಘೋಷಿಸಿಕೊಂಡಿದ್ದು, ಈ ಪೈಕಿ ಬಿಜೆಪಿ 1,034 ಕೋಟಿ ರುಪಾಯಿ ಆದಾಯ ಘೋಷಿಸಿಕೊಂಡಿದ್ದು, ಅತ್ಯಂತ ಶ್ರೀಮಂತ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2016-17ರಲ್ಲಿ ಬಿಜೆಪಿ ಘೋಷಿತ ಆಸ್ತಿ 1,034 ಕೋಟಿ ರುಪಾಯಿ ಆಗಿದೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಪ್ರಕಟಿಸಿದೆ. ಇದೇ ಅವಧಿಯಲ್ಲಿ 225.36 ಕೋಟಿ ರುಪಾಯಿ ಆಸ್ತಿ ಘೋಷಿಸಿಕೊಂಡ ಕಾಂಗ್ರೆಸ್ ಎರಡನೆ ಸ್ಥಾನದಲ್ಲಿ ಹಾಗೂ 173.58 ಕೋಟಿ ರುಪಾಯಿ ಆದಾಯ ಘೋಷಿಸಿಕೊಂಡಿರುವ ಬಿಎಸ್ಪಿ ಮೂರನೇ ಸ್ಥಾನದಲ್ಲಿದೆ. ಸಿಪಿಐ ಕೇವಲ 2.08 ಕೋಟಿ ರುಪಾಯಿ ಆದಾಯ ಘೋಷಿಸಿಕೊಳ್ಳುವ ಮೂಲಕ ಕೊನೆ ಸ್ಥಾನದಲ್ಲಿದೆ.
ವಿವಿಧ ರಾಷ್ಟ್ರೀಯ ಪಕ್ಷಗಳು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿದ ತೆರಿಗೆ ರಿಟರ್ನ್ಸ್ ಫೈಲ್ ನಿಂದ ಈ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಎಡಿಆರ್ ತಿಳಿಸಿದೆ.
ಈ ಏಳು ರಾಷ್ಟ್ರೀಯ ಪಕ್ಷಗಳು ಕಳೆದ ವರ್ಷ ಒಟ್ಟು 1,228.26 ಕೋಟಿ ರುಪಾಯಿ ಖರ್ಚು ವೆಚ್ಚ ತೋರಿಸಿವೆ.
2016-ನೇ ಸಾಲಿನಲ್ಲಿ ಬಿಜೆಪಿ 710 ಕೋಟಿ ರುಪಾಯಿ ವೆಚ್ಚ ಮಾಡಿರುವುದಾಗಿ ಹಾಗೂ ಕಾಂಗ್ರೆಸ್ 321.66 ಕೋಟಿ ರುಪಾಯಿ(ಆದಾಯಕ್ಕಿಂತ 96.36 ಕೋಟಿ ರು.ಹೆಚ್ಚು) ವೆಚ್ಚ ಮಾಡಿರುವುದಾಗಿ ಘೋಷಿಸಿಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


