ಆಂಧ್ರಪ್ರದೇಶ: ಸಂಬಂಧಿಕರ ಎದುರು ತಾಯಿಗೆ ನಿಂದನೆ, ಕೆಂಡಾಮಂಡಲಗೊಂಡ ಪುತ್ರನಿಂದ ತಂದೆ ಮೇಲೆ ಗುಂಡಿನ ದಾಳಿ
ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಸಂಬಂಧಿಕರೆದುರು ಹೆತ್ತಿ ತಾಯಿಯನ್ನು ನಿಂದಿಸಿಕ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಪುತ್ರನೊಬ್ಬ ತಂದೆ ಹಾಗೂ ಸಂಬಂಧಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ...

Published On :
ವಿಶಾಖಪಟ್ಟಣಂ: ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಸಂಬಂಧಿಕರೆದುರು ಹೆತ್ತಿ ತಾಯಿಯನ್ನು ನಿಂದಿಸಿಕ ಕಾರಣಕ್ಕೆ ತೀವ್ರವಾಗಿ ಕೆಂಡಾಮಂಡಲಗೊಂಡ ಪುತ್ರನೊಬ್ಬ ತಂದೆ ಹಾಗೂ ಸಂಬಂಧಿಕರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಆಂಧ್ರಪ್ರದೇಶದ ಕಿಂಚುರು ಎಂಬಂಲ್ಲಿ ಸೋಮವಾರ ನಡೆದಿದೆ.
ಪೋತುರಾಜು ಎಂಬುವವರು ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಕಾರ್ಯಕ್ರಮಕ್ಕೆ ಎಲ್ಲಾ ಸಂಬಂಧಿಕರಿಗೂ ಆಹ್ವಾನ ನೀಡಿದ್ದರು. ಇದರಂತೆ ನಿನ್ನೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಪೋತುರಾಜು ಅವರ ಪತ್ನಿ ತಂಪು ಪಾನೀಯವನ್ನು ನೀಡುತ್ತಿದ್ದರು. ತಂಪು ಪಾನೀಯ ಸಾಕಾಗದೆ ಬಂದಿದ್ದರಿಂದಾಗಿ ಪತ್ನಿ ಮೇಲೆ ತೀವ್ರವಾಗಿ ಕೋಪಗೊಂಡ ಪೊತುರಾಜು ಅವರು ಎಲ್ಲರ ಎದುರಿಗೇ ನಿಂದಿಸಿದ್ದಾರೆ.
ಕೂಡಲೇ ಸ್ಥಳದಲ್ಲಿದ್ದ ಪೋತುರಾಜು ಅವರ ಪುತ್ರ ಬಾಲಾಜಿ ತಾಯಿಯ ಬೆಂಬಲಕ್ಕೆ ನಿಂತು, ತಂದೆಯೊಂದಿಗೆ ಹಾಗೂ ಸಂಬಂಧಿ ಸಂನ್ಯಾಸಿ ಬಾಬು ಜೊತೆಗೆ ಮಾತಿನ ಚಕಮಕಿ ನಡೆಸಿದ್ದಾನೆ. ಬಳಿಕ ತೀವ್ರವಾಗಿ ಕೊಂಡಾಮಂಡಲಗೊಂಡು ದೇಸೀ ನಿರ್ಮಿತ ಬಂದೂಕಿನಿಂದ ಸಂಬಂಧಿಕರು ಹಾಗೂ ತಂದೆ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ರೀತಿಯ ಪ್ರಾಣಾಪಾಯಗಳು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆ ಬಳಿಕ ಬಾಲಾಜಿ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


