ಆಧಾರ್ ಪ್ರಕರಣ: ಗೌಪ್ಯತೆ ಹಕ್ಕು ಉಲ್ಲಂಘನೆ ವಿಚಾರ, ಕೇಂದ್ರದ ವಾದವನ್ನು ತಳ್ಳಿ ಹಾಕಿದ ಸುಪ್ರೀಂ
2016 ರಲ್ಲಿ ಆಧಾರ್ ಕಾನೂನು ಜಾರಿಗೆ ಮುನ್ನವೇ ನಾಗರಿಕರ ಬಯೋಮೆಟ್ರಿಕ್ ವಿವರ ಸಂಗ್ರಹಣೆ ಮಾಡಿದ್ದರೂ ಸಹ ಅಲ್ಲೆಲ್ಲಿಯೂ ನಾಗರಿಕರ ಗೌಪ್ಯತೆಗೆ ಹಕ್ಕನ್ನು ಉಲ್ಲಂಘಿಸಿಲ್ಲ.............

Published On :
ನವದೆಹಲಿ: 2016 ರಲ್ಲಿ ಆಧಾರ್ ಕಾನೂನು ಜಾರಿಗೆ ಮುನ್ನವೇ ನಾಗರಿಕರ ಬಯೋಮೆಟ್ರಿಕ್ ವಿವರ ಸಂಗ್ರಹಣೆ ಮಾಡಿದ್ದರೂ ಸಹ ಅಲ್ಲೆಲ್ಲಿಯೂ ನಾಗರಿಕರ ಗೌಪ್ಯತೆಗೆ ಹಕ್ಕನ್ನು ಉಲ್ಲಂಘಿಸಿಲ್ಲ ಎನ್ನುವ ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.
ಈ ಹಿಂದಿನ ಎರಡು ಪ್ರಕರಣಗಳಲ್ಲಿ ಗೌಪ್ಯತೆ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿಲ್ಲ ಎಂದ ಕೇಂದ್ರಕ್ಕೆ ಈ ಪ್ರಕರಣದಲ್ಲಿ ಗೌಪ್ಯತ ಪ್ರಶ್ನೆಯು "ಅಸಂಬದ್ಧವಾಗಿದೆ" ಎಂದು ಸನ್ಯಾಯಾಲಯ ತಿಳಿಸಿದೆ
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಪಂಚ ಸದಸ್ಯರ ಪೀಠವು 2010 ರಿಂದ 2016 ರ ನಡುವೆ ಸಂಗ್ರಹಿಸಿದ ಬಯೋಮೆಟ್ರಿಕ್ ವಿವರಗಳ ಕುರಿತಂತೆ ಕೇಂದ್ರದ ವಿವರಣೆ ಕೇಳಿದೆ.ಆಧಾರ್ ಕಾಯ್ದೆ ಜಾರಿಗೆ ಮುನ್ನ ಜನರಿಂದ ಬಯೋಮೆಟ್ರಿಕ್ ವಿವರ ಪಡೆದುಕೊಳ್ಳಲಾಗಿದೆ ಇದರ ಕುರಿತಂತೆ ಸ್ಪಷ್ಟನೆ ನೀಡಿ ಎಂದು ನ್ಯಾಯಾಲಯ ಸರ್ಕಾರಕ್ಕೆ ಆದೇಶಿಸಿದೆ.
2017 ರ ಆಗಸ್ಟ್ 24 ರಂದು ಒಂಬತ್ತು ನ್ಯಾಯಾಧೀಶರ ಪೀಠವು ಗೌಪ್ಯತೆ ಹಕ್ಕನ್ನು ಮೂಲಭೂತ ಹಕ್ಕು ಎನ್ನುವುದಾಗಿಯೂ ಅದರ ಉಲ್ಲಂಘನೆ ಬಗ್ಗೆ ರಾಜ್ಯ ಕ್ರಮವನ್ನು ಪರೀಕ್ಷಿಸಲು ನಿಯತಾಂಕಗಳನ್ನು ಹಾಕಬಹುದೆಂದು ಹೇಳಿತ್ತು.
ಆದರೆ ಕೇಂದ್ರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ. ಕೆ. ವೇಣುಗೋಪಾಲ್, ಎಮ್ ಪಿ ಶರ್ಮಾ (1950) ಮತ್ತು ಖರಕ್ ಸಿಂಗ್ (1962) ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ ಗೌಪ್ಯತೆ ಹಕ್ಕು ಮೂಲಭೂತ ಹಕ್ಕಲ್ಲವೆಂದು ವಾದಿಸಿದ್ದಾರೆ.ಅಲ್ಲದೆ ಗೌಪ್ಯತೆ ಹಕ್ಕಿನ ಸಂಬಂಧ ಯಾವುದೇ ಕಾನೂನುಗಳಿಲ್ಲದ ವೇಳೆ 2010 ಮತ್ತು 2016 ರ ನಡುವೆ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುವ ಸಂದರ್ಭದಲ್ಲಿ ಕೇಂದ್ರ ಮತ್ತು ಯುಐಡಿಎಐ ಗೌಪ್ಯತೆ ಹಕ್ಕುಗಳನ್ನು ಉಲ್ಲಂಘಿಸಿಲ್ಲ. ಎಂದು ವಾದಿಸಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


