ಲಖನೌ: ಜೆಟ್ ಏರ್ವೇಸ್ ವಿಮಾನ ತುರ್ತು ಭೂಸ್ಪರ್ಷ, ಪ್ರಯಾಣಿಕರು ಪಾರು
71 ಪ್ರಯಾಣಿಕರಿದ್ದ ದೆಹಲಿ ಜೆಟ್ ಏರ್ವೇಸ್ ವಿಮಾನವೊಂದು ಲಖನೌ ನ ಅಮೋಸಿ ವಿಮಾನ ನಿಲ್ದಾನಾದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.
Published On :
ಲಖನೌ(ಉತ್ತರ ಪ್ರದೇಶ): 71 ಪ್ರಯಾಣಿಕರಿದ್ದ ದೆಹಲಿ ಜೆಟ್ ಏರ್ವೇಸ್ ವಿಮಾನವೊಂದು ಲಖನೌ ನ ಅಮೋಸಿ ವಿಮಾನ ನಿಲ್ದಾನಾದಲ್ಲಿ ತುರ್ತು ಭೂಸ್ಪರ್ಷ ಮಾಡಿದೆ.
ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಷ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ವಿಮಾನ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಯಾವ ತುರ್ತು ಪರಿಸ್ಥಿತಿಯನ್ನೂ ನಿಭಾಯಿಸಲು ಸಿದ್ದರಿದ್ದೇವೆ ಎಂದುವಿಮಾನ ನಿಲ್ದಾಣದ ನಿರ್ದೇಶಕ ಎ.ಕೆ.ಶರ್ಮಾ ಹೇಳಿದ್ದಾರೆ.
ಘಟನೆಯ ಬಳಿಕ ವಿಮಾನವು 26 ಪ್ರಯಾಣಿಕರನ್ನು ದೆಹಲಿಗೆ ಕರೆದೊಯ್ದಿದೆ ಎಂದು ಶರ್ಮಾ ಹೇಳಿದ್ದಾರೆ.
ಆಹಾರದ ಟ್ರಕ್ ಗೆ ವಿಮಾನ ಢಿಕ್ಕಿ
ಜೆಟ್ ಏರ್ವೇಸ್ ವಿಮಾನವೊಂದು ಆಹಾರ ಸಾಗಣೆ ಟ್ರಕ್ ಗೆ ಢಿಕ್ಕಿಯಾದ ಘಟನೆ ದೆಹಲಿ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನದ ರೆಕ್ಕೆಯು ರನ್ ವೇ ಬಳಿಯಿದ್ದ ತಾಜ್ ಸ್ಟಾರ್ ಆಹಾರ ಟ್ರಕ್ ನ ಅಡಿಯಲ್ಲಿ ಸಿಲುಕಿದೆ.
ಘಟನೆಯ ಕಾರಣ ಯಾವ ಅಪಾಯ ಸಂಭವಿಸುವ ಮುನ್ನ ಅಧಿಕಾರಿಗಳು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದಾರೆಂದು ಎ ಎನ್ ಐ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

