ದೇಶ

ತೀವ್ರ ಗದ್ದಲಕ್ಕೆ ಸಂಸತ್ ಕಲಾಪ ಬಲಿ: ವಿಶೇಷ ಅಧಿವೇಶನ ನಡೆಸುವಂತೆ ರಾಜ್ಯಸಭೆ ಸಭಾಧ್ಯಕ್ಷರಿಗೆ ಕಾಂಗ್ರೆಸ್ ಸಂಸದ ಪತ್ರ

ಕಾವೇರಿ ವಿವಾದ, ಎಸ್'ಸಿ/ಎಸ್'ಟಿ ಕುರಿತ ಸುಪ್ರೀಂಕೋರ್ಟ್ ಆದೇಶ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ ಹಾಗೂ ಗದ್ದಲದಿಂದಾಗಿ ಸಂಸತ್ ಕಲಾಪ ಬಲಿಯಾಗಿರುವ ಬೆನ್ನಲ್ಲೇ...

ತೀವ್ರ ಗದ್ದಲಕ್ಕೆ ಸಂಸತ್ ಕಲಾಪ ಬಲಿ: ವಿಶೇಷ ಅಧಿವೇಶನ ನಡೆಸುವಂತೆ ರಾಜ್ಯಸಭೆ ಸಭಾಧ್ಯಕ್ಷರಿಗೆ ಕಾಂಗ್ರೆಸ್ ಸಂಸದ ಪತ್ರ
ಸಂಗ್ರಹ ಚಿತ್ರೆ
Published On :
ನವದೆಹಲಿ; ಕಾವೇರಿ ವಿವಾದ, ಎಸ್'ಸಿ/ಎಸ್'ಟಿ ಕುರಿತ ಸುಪ್ರೀಂಕೋರ್ಟ್ ಆದೇಶ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿರೋಧ ಪಕ್ಷಗಳು ನಡೆಸಿದ ಪ್ರತಿಭಟನೆ ಹಾಗೂ ಗದ್ದಲದಿಂದಾಗಿ ಸಂಸತ್ ಕಲಾಪ ಬಲಿಯಾಗಿರುವ ಬೆನ್ನಲ್ಲೇ, ವಿಶೇಷ ಅಧಿವೇಶ ನಡೆಸುವಂತೆ ಕಾಂಗ್ರೆಸ್ ಸಂಸದರೊಬ್ಬರು ರಾಜ್ಯಸಭೆ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ. 
ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಅವರು ನಾಯ್ಡು ಅವರಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಪ್ರಮುಖ ವಿಚಾರಗಳ ಸಂಬಂಧ ಚರ್ಚೆ ನಡೆಸುವ ಅಗತ್ಯವಿದ್ದು, ಈ ಹಿನ್ನಲೆಯಲ್ಲಿ ಮೇ-ಜೂನ್ ತಿಂಗಳಲ್ಲಿ 2 ವಾರಗಳ ಕಾರ ವಿಶೇಷ ಅಧಿವೇಶನ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಹಾಳಾಗಿರುವ ಸಂಸತ್ತಿನ ಗೌರವವನ್ನು ಮರುಸ್ಥಾಪನೆ ಮಾಡಲು ವಿಶೇಷ ಅಧಿವೇಶನ ನಡೆಸುವ ಅಗತ್ಯವಿದೆ. ಮೇ ಅಥವಾ ಜೂನ್ ತಿಂಗಳಿನಲ್ಲೇಕೆ 2 ವಾರಗಳ ವಿಶೇಷ ಅಧಿವೇಶನವನ್ನು ನಡೆಸಬಾರದು?... ವಿಶೇಷ ಅಧಿವೇಶನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ವಿಚಾರಗಳ ಕುರಿತಂತೆ ಚರ್ಚೆ ನಡೆಸಬಹುದು. ಜುಲೇ ತಿಂಗಳ ಮಧ್ಯದ ದಿನಗಳಲ್ಲಿ ಚಳಿಗಾಲ ಅಧಿವೇಶನ ನಡೆಸಲಾಗುತ್ತದೆ ಎಂಬುದು ನನಗೆ ಗೊತ್ತಿದೆ. ಆದರೆ, ವಿಶೇಷ ಅಧಿವೇಶನ ನಡೆಸಿದರೆ, ಇದು ಇತರರಿಗೆ ವಿಭಿನ್ನ ರೀತಿಯ ಸಂಕೇತವನ್ನು ನೀಡಲಿದೆ. ಸಂಸತ್ ಕಲಾಪ ಸಂಪೂರ್ಣವಾಗಿ ಬಲಿಯಾಗಿರುವುದು ಸಂಸತ್ತಿಗೆ ಅಗೌರವವನ್ನುಂಟುಮಾಡಿದೆ. ವಿಶೇಷ ಅಧಿವೇಶನವು ಈ ಗೌರವವನ್ನು ಮರುಸ್ಥಾಪಿಸಲಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ಪ್ರಧಾನಮಂತ್ರಿ ನೇತೃತ್ವದ ಎನ್'ಡಿಎ ಸರ್ಕಾರದ ವಿರುದ್ದ ಕಿಡಿಕಾರಿರುವ ಅವರು, ನಾಲ್ಕು ವರ್ಷಗಳಲ್ಲಿ ರಾಜಕೀಯ ಪಕ್ಷಗಳೊಂದಿಗೆ ಸೂಕ್ತ ರೀತಿಯಲ್ಲಿ ಹಾಗೂ ಅರ್ಥಪೂರ್ಣ ಮಾತುಕತೆ ನಡೆಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸಂಸತ್ತಿನಲ್ಲಿ ಕಲಾಪ ಸುಗಮವಾಗಿ ಸಾಗುವಂತೆ ಮಾಡಲು ರಾಜಕೀಯ ಪಕ್ಷಗಳೊಂದಿಗೆ ಅರ್ಥಪೂರ್ಣ ಮಾತುಕತೆ ನಡೆಸುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ, ಸರ್ಕಾರ ಇದರಲ್ಲಿ ವಿಫಲವಾಗಿದೆ ಎಂದು ತಿಳಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.