ದೇಶ

ಐಐಎಸ್ ಸಿ ಬೆಂಗಳೂರು ದೇಶದ ನಂಬರ್ ಒನ್ ಶಿಕ್ಷಣ ಸಂಸ್ಥೆ

ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ) ಶಿಕ್ಷಣ ಸಂಸ್ಥೆಯು ದೇಶದ ನಂಬರ್ ಒನ್ ಶಿಕ್ಷಣ....

ಐಐಎಸ್ ಸಿ ಬೆಂಗಳೂರು ದೇಶದ ನಂಬರ್ ಒನ್ ಶಿಕ್ಷಣ ಸಂಸ್ಥೆ
ಐಐಎಸ್ ಸಿ ಬೆಂಗಳೂರು
Published On :
ನವದೆಹಲಿ: ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್(ಐಐಎಸ್ ಸಿ) ಶಿಕ್ಷಣ ಸಂಸ್ಥೆಯು ದೇಶದ ನಂಬರ್ ಒನ್ ಶಿಕ್ಷಣ ಸಂಸ್ಥೆ ಎಂಬ ಹೆಗ್ಗಳಿಗೆ ಪಡೆದಿದೆ.
ಇಂದು ದೆಹಲಿ ವಿಜ್ಞಾನ ಭವನದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನ್ಯಾಷನಲ್ ರ್ಯಾಂಕಿಂಗ್ ಫ್ರೇಮ್'ವರ್ಕ್ (ಎನ್'ಐಆರ್'ಎಫ್) ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಐಐಎಸ್ ಸಿ ಬೆಂಗಳೂರು ಅಗ್ರಸ್ಥಾನ ಪಡೆದಿದೆ. 
ಇನ್ನು ಐಐಟಿ ಮದ್ರಾಸ್ ಅತ್ಯುತ್ತಮ ಇಂಜಿನಿಯರಿಂಗ್ ಕಾಲೇಜ್ ಹಾಗೂ ಐಐಎಂ ಅಹಮದಾಬಾದ್ ಅತ್ಯುತ್ತಮ ಮ್ಯಾನೇಜ್ ಮೆಂಟ್ ಸಂಸ್ಥೆ ಸ್ಥಾನ ಪಡೆದಿವೆ.
ದೆಹಲಿಯ ಮಿರಾಂಡಾ ಹೌಸ್ ದೇಶದ ನಂಬರ್ ಒನ್ ಕಾಲೇಜು ಎನಿಸಿದ್ದು, ಐಐಎಂಎಸ್ ಅತ್ಯುತ್ತಮ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಬೆಂಗಳೂರಿನ ಎನ್ಎಲ್ ಎಸ್ ಐಯು ಅತ್ಯುತ್ತಮ ಕಾನೂನು ಶಿಕ್ಷಣ ಸಂಸ್ಥೆ ಎನಿಸಿಕೊಂಡಿದೆ.
ದೇಶದ ಅತ್ಯುತ್ತಮ ವಿಶ್ವ ವಿದ್ಯಾಲಯಗಳ ಪೈಕಿ ಬೆಂಗಳೂರಿನ ಐಐಎಸ್ಸಿ ಸಿ ಮೊದಲ ಸ್ಥಾನ ಪಡೆದರೆ, ದೆಹಲಿಯ ಜೆಎನ್ ಯು ಎರಡನೇ ಸ್ಥಾನ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮೂರನೇ ಸ್ಥಾನ ಪಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.