ರಾಜ್ಯಸಭಾ ನಾಯಕರಾಗಿ ಮತ್ತೆ ಅರುಣ್ ಜೇಟ್ಲಿ ನೇಮಕ
ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮತ್ತೆ ಮಂಗಳವಾರ ಆಯ್ಕೆಯಾಗಿದ್ದಾರೆ...

Published On :
ನವದೆಹಲಿ: ರಾಜ್ಯಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರಾಗಿ ವಿತ್ತ ಸಚಿವ ಅರುಣ್ ಜೇಟ್ಲಿಯವರು ಮತ್ತೆ ಮಂಗಳವಾರ ಆಯ್ಕೆಯಾಗಿದ್ದಾರೆ.
ರಾಜ್ಯಸಭಾ ನಾಯಕರಾಗಿ ಜೇಟ್ಲಿಯವರ ಅವಧಿ ನಿನ್ನೆಗೆ ಪೂರ್ಣಗೊಂಡಿತ್ತು. ಉತ್ತರಪ್ರದೇಶದಿಂದ ಮೇಲ್ಮನೆಗೆ ಜೇಟ್ಲಿಯವರು ಮರು ಆಯ್ಕೆಯಾಗಿದ್ದಾರೆಂದು ರಾಜ್ಯಸಭೆ ಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಹೇಳಿದ್ದಾರೆ.
ಬಿಜೆಪಿ ನಾಯಕ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾತ್ ಅವರು ರಾಜ್ಯಸಭಾ ಸದಸ್ಯರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದಲ್ಲದೆ, ಅರುಣ್ ಜೇಟ್ಲಿ. ಜಿವಿಎಲ್ ನರಸಿಂಹ ರಾವ್, ಹರ್ನಾತ್ ಯಾದವ್, ಅಶೋಕ್ ಬಾಜ್ಬಾಯ್, ವಿಜಯ್ ಪಾಲ್ ಸಿಂಗ್ ತೋಮರ್, ಕಂಠ ಕರ್ದಾಮ್, ಸಕಲ್ದೀಪ್ ರಜ್ಭಾರ್ ಮತ್ತು ಅನಿಲ್ ಅಗರ್ವಾಲ್ ಅವರೂ ಕೂಡ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಆರ್'ಜೆಡಿ ವಕ್ತಾರ ಮನೋಜ್ ಝಾ, ತೆಲುಗು ದೇಶಂ ಪಕ್ಷದ ಉಪಾಧ್ಯಕ್ಷ ಸಿ.ಎಂ. ರಮೇಶ್ ಅವರೂ ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


