ಕೊಚ್ಚಿ: ಗುಂಡೇಟಿಗೆ ನೌಕಾ ಅಧಿಕಾರಿ ಬಲಿ
ಇಲ್ಲಿನ ನೌಕಾನೆಲೆಯ ನೌಕೆಯೊಂದರಲ್ಲಿ ನಡೆದ ಗುಂಡಿನ ಧಾಳಿಯಲ್ಲಿ ನೌಕಾಪಡೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.

Published On :
ಕೊಚ್ಚಿ: ಇಲ್ಲಿನ ನೌಕಾನೆಲೆಯ ನೌಕೆಯೊಂದರಲ್ಲಿ ನಡೆದ ಗುಂಡಿನ ಧಾಳಿಯಲ್ಲಿ ನೌಕಾಪಡೆ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದೆ.
ನೌಕೆಯಲ್ಲಿ ಕರ್ತವ್ಯದ ಮೇಲಿದ್ದ ಅಧಿಕಾರಿ ತನ್ನ ಸೇವಾ ಬಂದೂಕಿನಿಂದ ಅಕಸ್ಮಾತ್ ಆಗಿ ಹಾರಿದ ಗುಂಡಿನಿಂದ ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ನೌಕಾದಳದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಶುಶ್ರೂಷೆ ಪಲಕಾರಿಯಾಗದೆ ಅಧಿಕಾರಿ ಮೃತಪಟ್ಟಿದ್ದಾರೆ.
ಕೊಚ್ಚಿಯ ನೌಕಾ ನೆಲೆಯು ದಕ್ಷಿಣ ನೌಕಾ ಕಮಾಂಡೋಗಳ ಪ್ರಧಾನ ಕಾರ್ಯಾಲಯವನ್ನು ಒಳಗೊಂಡಿದ್ದು, ಇದು ಭಾರತೀಯ ನೌಕಾಪಡೆಯ ಮೂರು ಮುಖ್ಯ ಕಾರ್ಯಾಲಯಗಳಲ್ಲಿ ಒಂದಾಗಿದೆ.
ಘಟನೆ ಕುರಿತ ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಕೊಚ್ಚಿKochiA Naval officergunshot woundSouthern Naval Commandನೌಕಾ ಅಧಿಕಾರಿಗುಂಡೇಟಿನಿಂದ ಗಾಯದಕ್ಷಿಣ ನೌಕಾ ಕಮಾಂಡೋ ಕಾರ್ಯಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


