ಮಾಜಿ ಮಹಾರಾಷ್ಟ್ರ ಮುಖ್ಯಮಂತ್ರಿ ನಾರಾಯಣ್ ರಾಣೆ ಯಿಂದ ಹೊಸ ರಾಜಕೀಯ ಪಕ್ಷದ ಘೋಷಣೆ
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ್ ಟಿ. ರಾಣೆ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಎನ್ನುವ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದರು.

Published On :
ಮುಂಬಯಿ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ನಾರಾಯಣ್ ಟಿ. ರಾಣೆ ಮಹಾರಾಷ್ಟ್ರ ಸ್ವಾಭಿಮಾನ ಪಕ್ಷ ಎನ್ನುವ ಹೊಸ ರಾಜಕೀಯ ಪಕ್ಷವನ್ನು ಆರಂಭಿಸಿದರು. ಇದು ರಾಜ್ಯದ ಎಲ್ಲ ಕ್ಷೇತ್ರಗಳ ಒಟ್ಟಾರೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ.
ಶಿವಸೇನೆಯಲ್ಲಿ ಮತ್ತು 12 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿಯೂ ಇದ್ದ ಕೊಂಕಣ ಕರಾವಳಿ ಪ್ರದೇಶದ ಹಿರಿಯ ಮುಖಂಡ ರಾಣೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ ಡಿಎ) ಸೇರಲಿದ್ದಾರೆಂದು ರಾಜಕೀಯ ವಿಶ್ಲೇಷಕರು ಊಹಿಸಿದ್ದರು.
"ಎಲ್ಲ ಬದ್ದತೆಗಳೊಡನೆ ರಾಜ್ಯದ ಜನರ ಹಿತಾಸಕ್ತಿಗಳಿಗಾಗಿ ಕೆಲಸ ಮಾಡುವುದು, ಸಧ್ಯದ ನಡೆಯಾಗಿದೆ, ಪಕ್ಷದ ಸಂಘಟನೆ ಬಳಿಕ ಭವಿಷ್ಯದ ಕಾರ್ಯಸೂಚಿಗಳ ಬಗ್ಗೆ ಯೋಚಿಸುತ್ತೇವೆ. ಇದರಲ್ಲಿ ಎನ್ ಡಿಎ ಜೊತೆ ಸೇರುವ ವಿಚಾರ ಸಹ ಇರಲಿದೆ" ಎಂದು ರಾಣೆ ಹೇಳಿದರು.
ಆಡಳಿತ ಪಕ್ಷ ಶಿವಸೇನಾ ವಿರುದ್ಧ ಹರಿಹಾಯ್ದ ರಾಣೆ ಕೇಂದ್ರದ ಬುಲೆಟ್ ರೈಲು ಯೋಜನೆ ಒಂದು ಅಭಿವೃದ್ಧಿ ಕಾರ್ಯವಾಗಿದೆ. ಇದು ದೇಶಕ್ಕೆ ಅಗತ್ಯವಿದೆ. ಜನರಿಗೆ ಇದರಿಂದ ಮೊಬೈಲ್ ಫೋನ ನಷ್ಟೇ ಅನುಕೂಲವಾಗಲಿದೆ ಎಂದರು.
1995 ರಿಂದ 1999 ರವರೆಗೂ ರಾಜ್ಯವನ್ನು ಆಳಿದ ಶಿವಸೇನಾ-ಬಿಜೆಪಿ ಮೈತ್ರಿಕೂಟದಲ್ಲಿ ಸುಮಾರು ಒಂದು ವರ್ಷ (1999) ಮುಖ್ಯಮಂತ್ರಿಯಾಗಿದ್ದ ರಾಣೆ 2005 ರಲ್ಲಿ ಕಾಂಗ್ರೆಸ್ ಗೆ ಸೇರಿದ್ದರು.
ಎಂಎಸ್ ಪಿ ಹುಟ್ಟಿನೊಂದಿಗೆ ಅವರ ಮೂರನೇ ರಾಜಕೀಯ ಇನ್ನಿಂಗ್ ಪ್ರಾರಂಭಗೊಂಡಿದೆ. ರಾಣೆ ಅವರ ಸ್ವಂತ ಜಿಲ್ಲೆ ಸಿಂಧುದುರ್ಗ ದಲ್ಲಿ ಡ್ರಮ್ಸ್ ಬಾರಿಸಿ, ಪತಾಕಿ ಸಿಡಿಸುವ ಮೂಲಕ ತಮ್ಮ ನಾಯಕನ ಹೊಸ ಪಕ್ಷದ ಉದಯವನ್ನು ಸಂಭ್ರಮಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಹಾರಾಷ್ಟ್ರMaharashtraNarayan Raneನಾರಾಯಣ್ ರಾಣೆMaharashtra Swabhiman Partyformer Maharashtra Chief MinisterNarayan T. Raneಮಹಾರಾಷ್ಟ್ರ ಸ್ವಾಭಿಮಾನ್ ಪಾರ್ಟಿಮಾಜಿ ಮಹಾರಾಷ್ಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


