ದೇಶ

ಮೊದಲ ಬಾರಿ ಸಿಯಾಚಿನ್ ಗೆ ಭೇಟಿ ನೀಡಿದ ರಕ್ಷಣಾ ಸಚಿವೆ, ಪ್ರಥಮ್-ಶ್ಯೋಕ್ ಬ್ರಿಡ್ಜ್ ಗೆ ಚಾಲನೆ

ಇದೇ ಮೊದಲ ಬಾರಿಗೆ ಸಿಯಾಚಿನ್ ಗೆ ಭೇಟಿ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೇಹ್....

ಮೊದಲ ಬಾರಿ ಸಿಯಾಚಿನ್ ಗೆ ಭೇಟಿ ನೀಡಿದ ರಕ್ಷಣಾ ಸಚಿವೆ, ಪ್ರಥಮ್-ಶ್ಯೋಕ್ ಬ್ರಿಡ್ಜ್ ಗೆ ಚಾಲನೆ
ಭದ್ರತಾ ಸಿಬ್ಬಂದಿಯೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್
Published On :
ಶ್ರೀನಗರ: ಇದೇ ಮೊದಲ ಬಾರಿಗೆ ಸಿಯಾಚಿನ್ ಗೆ ಭೇಟಿ ನೀಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಲೇಹ್ ನಲ್ಲಿರುವ ಪ್ರಥಮ್ -ಶ್ಯೋಕ್ ಎಂಬ ಸೇತುವೆಯನ್ನು ಉದ್ಘಾಟಿಸಿದರು.
ನಿನ್ನೆಯಿಂದ ಎರಡು ದಿನಗಳ ಜಮ್ಮು-ಕಾಶ್ಮೀರ ಪ್ರವಾಸ ಕೈಗೊಂಡಿರುವ ನಿರ್ಮಲಾ ಸೀತಾರಾಮನ್ ಅವರು, ಇಂದು ಡುರ್ಬುಕ್ ಮತ್ತು ದೌಲತ್ ಬೇಗ್ ಒಲ್ಡಿ ನಡುವೆ ಶ್ಯೋಕ್ ನದಿಗೆ ಅಡ್ಡವಾಗಿ ಗಡಿ ರಸ್ತೆಗಳ ಸಂಸ್ಥೆ ನಿರ್ಮಿಸಿದ ‘ಪ್ರಥಮ್ ಶ್ಯೋಕ್’ಸೇತುವೆಯನ್ನು ಉದ್ಘಾಟಿಸಿದರು.
ಸೇತುವೆ ಉದ್ಘಟಿಸಿ ಮಾತನಾಡಿದ ರಕ್ಷಣಾ ಸಚಿವೆ, ಅತೀ ಎತ್ತರದ ಪ್ರದೇಶದಲ್ಲಿ ರಸ್ತೆ, ಸೇತುವೆಗಳನ್ನು ನಿರ್ಮಿಸುವುದು ಸುಲಭದ ಮಾತಲ್ಲ. ದೇಶದ ನಾನಾ ರಾಜ್ಯಗಳಿಂದ ವೈಪರಿತ್ಯ ವಾತಾವರಣದಲ್ಲಿ ದೇಶ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವೆಂದು ಸೈನಿಕರ ಸೇವೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಭೂ ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಆರ್ಮಿ ಕಮಾಂಡರ್, ಉತ್ತರ ಕಮಾಂಡ್‌'ಗಳು ಸಚಿವರಿಗೆ ಸಾಥ್ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.