ಅತ್ಯಾಚಾರ ಪ್ರಕರಣ: ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್ ಪಾಲ್ ವಿರುದ್ಧ ಆರೋಪ ಪಟ್ಟಿ ದಾಖಲು
ತೆಹಲ್ಕಾ ದ ಮಾಜಿ ಸಂಪಾದಕ, ಮುಖ್ಯಸ್ಥ ತರುಣ್ ತೇಜ್ ಪಾಲ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ........

Published On :
ನವದೆಹಲಿ:ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ತೆಹಲ್ಕಾದ ಮಾಜಿ ಸಂಪಾದಕ ತೇಜ್ ಪಾಲ್ ವಿರುದ್ಧ ಆರೋಪ ಪಟ್ಟಿ ದಾಖಲಿಸಲು ಗೋವಾ ನ್ಯಾಯಾಲಯ ಇಂದು ಇಂದು ಅನುಮತಿ ನೀಡಿದೆ.
ತೆಹಲ್ಕಾದ ಮಾಜಿ ಸಂಪಾದಕ ತೇಜ್ ಪಾಲ್ ಅತ್ಯಾಚಾರ, ಲೈಂಗಿಕ ಕಿರುಕುಳ, ಸಂಯಮ ರಹಿತ ವರ್ತನೆ ಆರೋಪ ಹೊತ್ತಿದ್ದಾರೆ.
ತನ್ನ ಮೇಲಿನ ಆರೋಪದ ವಿವರಗಳನ್ನು ತರುಣ್ ತೇಕಜ್ ಪಾಲ್ ಸಹ ಕೇಳಿಸಿಕೊಂಡಿದ್ದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಫ್ರಾನ್ಸಿಸ್ಕೋ ತವೈರಾ ಎಎನ್ ಐ ಸುದ್ದಿವಾಹಿನಿಗೆ ತಿಳಿಸಿದರು.
ತೇಜ್ ಪಾಲ್ ವಿರುದ್ಧದ ವಿಚಾರಣೆಯನ್ನು ಮುಂದುವರಿಸಲು ನಿರಾಕರಿಸಿದ ನ್ಯಾಯಾಲಯವು ಅ. 21 ರೊಳಗೆ ಪ್ರಕರಣದ ಸ್ಥಿತಿ ಗತಿ ವರದಿ ಸಲ್ಲಿಸುವಂತೆ ಕೋರಿದೆ.
ತರುಣ್ ತೇಜ್ ಪಾಲ್ ಪರ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ತಿಂಗಳ ಕಾಲ ಕಾಲಾವಕಾಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಮಾಪುಸಾ ಹೆಚ್ಚುವರಿ ಜಿಲ್ಲಾ ಮತ್ತು ಅಧೀನ ನ್ಯಾಯಾಲಯವು ವೀಡಿಯೋ ವಿಚಾರಣೆ ಮೂಲಕ ಈ ಆದೇಶ ನೀಡಿದೆ.
ತೇಜ್ ಪಾಲ್ ಮಂಗಳವಾರ ಗೋವಾದ ಬಾಂಬೆ ಹೈ ಕೋರ್ಟ್ ನಿಂದ ಪ್ರಕರಣದ ಕುರಿತು ಯಾವುದೇ ವಿನಾಯ್ತಿ ಪಡೆಯುವಲ್ಲಿ ವಿಫಲರಾಗಿದ್ದರು. ಕೆಳ ನ್ಯಾಯಾಲಯದಲ್ಲಿ ತೇಜ್ ಪಾಲ್ ವಿರುದ್ಧ ವಿಚಾರಣೆಗೆ ತಡೆ ಹಾಕಲು ಹೈಕೋರ್ಟ್ ನಿರಾಕರಿಸಿತ್ತು..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tarun TejpalTehelkaGoa courtಲೈಂಗಿಕ ಕಿರುಕುಳ ಪ್ರಕರಣsexual assault caseತೆಹೆಲ್ಕಾತರುಣ್ ತೇಜ್ ಪಾಲ್ಗೋವಾ ನ್ಯಾಯಾಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


