ದೇಶ

ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ದುರ್ಗಾಷ್ಟಮಿ ಶುಭಾಶಯ, ಭಗತ್ ಸಿಂಗ್ ಸ್ಮರಣೆ

ಸೆ.28 ರಂದು ದೇಶಾದ್ಯಂತ ದುರ್ಗಾಷ್ಟಮಿ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದುರ್ಗಾಷ್ಟಮಿ ಅಂಗವಾಗಿ ಶುಭಾಶಯ ಕೋರಿದ್ದಾರೆ.

ಪ್ರಧಾನಿ ಮೋದಿಯಿಂದ ದೇಶದ ಜನತೆಗೆ ದುರ್ಗಾಷ್ಟಮಿ ಶುಭಾಶಯ, ಭಗತ್ ಸಿಂಗ್ ಸ್ಮರಣೆ
ನರೇಂದ್ರ ಮೋದಿ
Published On :
ನವದೆಹಲಿ: ಸೆ.28 ರಂದು ದೇಶಾದ್ಯಂತ ದುರ್ಗಾಷ್ಟಮಿ ಆಚರಣೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ದುರ್ಗಾಷ್ಟಮಿ ಅಂಗವಾಗಿ ಶುಭಾಶಯ ಕೋರಿದ್ದಾರೆ. 
ಎಲ್ಲರಿಗೂ ದುರ್ಗಾಷ್ಟಮಿ ಶುಭಾಶಯಗಳು. ದೇವಿಯ ಆಶೀರ್ವಾದದಿಂದ ಎಲ್ಲಾ ರೀತಿಯ ಅನ್ಯಾಯ ಕೊನೆಗೊಂಡು, ಸಮಾಜದಲ್ಲಿ ಶಾಂತಿ, ಸಂತೋಷ ತರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ನವರಾತ್ರಿಯ 8 ನೇ ದಿನ ನಾವು ಮಾತೆ ಮಹಾ ಗೌರಿಯನ್ನು ಆರಾಧಿಸುತ್ತೇವೆ. ದೇವಿಯ ಆಶೀರ್ವಾದ ನಮ್ಮೆಲ್ಲರ ಸಂತೋಷವನ್ನು ಇಮ್ಮಡಿಗೊಳಿಸಲು ಎಂದು ಮೋದಿ ಸಂದೇಶದಲ್ಲಿ ತಿಳಿಸಿದ್ದಾರೆ. 
ಭಗತ್ ಸಿಂಗ್ 110 ನೇ ಜನ್ಮಾದಿನಾಚರಣೆ
ಸೆ.28 ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ 110 ನೇ ಜನ್ಮದಿನಾಚರಣೆಯಾಗಿದ್ದು, ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ. " ಧೈರ್ಯಶಾಲಿ ಶಾಹೀದ್ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯಂದು ಅವರಿಗೆ ನಮಿಸುತ್ತೇನೆ, ಭಗತ್ ಸಿಂಗ್ ಅವರ ವ್ಯಕ್ತಿತ್ವ ಭಾರತದ ಪೀಳಿಗೆಗಳಿಗೆ ಸ್ಪೂರ್ತಿ ನೀಡುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.