ದೇಶ

ದೆಹಲಿ: ಹಿರಿಯ ಪತ್ರಕರ್ತ ಕೆಜೆ ಸಿಂಗ್ ಮತ್ತು ಅವರ ತಾಯಿ ಸಾವು, ಕೊಲೆಯ ಶಂಕೆ

ಇನ್ನೊಂದು ಆಘಾತಕಾರಿ ಘಟನೆಯಲ್ಲಿ ಹಿರಿಯ ಪತ್ರಕರ್ತ ಕೆಜೆ ಸಿಂಗ್ ಮತ್ತು ಅವರ 92 ವರ್ಷದ ವೃದ್ಧೆ ತಾಯಿಯ ಮೃತದೇಹ ದೆಹಲಿಯ ಮೊಹಾಲಿ...

ದೆಹಲಿ: ಹಿರಿಯ ಪತ್ರಕರ್ತ ಕೆಜೆ ಸಿಂಗ್ ಮತ್ತು ಅವರ ತಾಯಿ ಸಾವು, ಕೊಲೆಯ ಶಂಕೆ
ಹಿರಿಯ ಪತ್ರಕರ್ತ ಕೆಜೆ ಸಿಂಗ್
Published On :
ನವದೆಹಲಿ: ಇನ್ನೊಂದು ಆಘಾತಕಾರಿ ಘಟನೆಯಲ್ಲಿ ಹಿರಿಯ ಪತ್ರಕರ್ತ ಕೆಜೆ ಸಿಂಗ್ ಮತ್ತು ಅವರ 92 ವರ್ಷದ ವೃದ್ಧೆ ತಾಯಿಯ ಮೃತದೇಹ ದೆಹಲಿಯ ಮೊಹಾಲಿ ನಿವಾಸದಲ್ಲಿ ಇಂದು ಸಿಕ್ಕಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ವರದಿ ಪ್ರಕಾರ ಇಬ್ಬರನ್ನೂ ಹತ್ಯೆಗೈಯಲಾಗಿದೆ ಎಂದು ಶಂಕಿಸಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಶಿರೊಮಣಿ ಅಕಾಲಿ ದಳ ಅಧ್ಯಕ್ಷ ಸುಖ್ ಬೀರ್ ಸಿಂಗ್ ಬಾದಲ್, ಹಿರಿಯ ಪತ್ರಕರ್ತ ಕೆ,ಜೆ.ಸಿಂಗ್ ಅವರ ತಾಯಿ ಜೊತೆ ಕೊಲೆಯಾಗಿದ್ದಾರೆ ಎಂದು ಈಗ ತಾನೆ ಸುದ್ದಿ ಕೇಳಿದೆ. ಈ ಕೊಲೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಆರೋಪಿಗಳನ್ನು ಕೂಡಲೇ ಪತ್ತೆಹಚ್ಚಿ ಶಿಕ್ಷಿಸುವಂತೆ ಬಾದಲ್ ಒತ್ತಾಯಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ದಿನ್ ರಾತ್ ಸುದ್ದಿ ಚಾನೆಲ್ ನ ಪತ್ರಕರ್ತ ಸಂತನು ಭೌಮಿಕ್ ಎಂಬವರನ್ನು ಪ್ರತಿಭಟನಾ ರ್ಯಾಲಿಯ ನೇರ ಪ್ರಸಾರ ಮಾಡುತ್ತಿರುವಾಗ ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಹತ್ಯೆಗೈಯಲಾಗಿತ್ತು. 
ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.