ರಯಾನ್ ಶಾಲೆ ವಿದ್ಯಾರ್ಥಿ ಹತ್ಯೆ: ಶಾಲಾ ಬಸ್ ನಿರ್ವಾಹಕ ಸೇರಿ ಮೂವರಿಗೆ ಸಿಬಿಐ ಕಸ್ಟಡಿ
ಸೆ. 8 ರಂದು ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಏಳು ವರ್ಷದ ವಿದ್ಯಾರ್ಥಿ ಪ್ರದ್ಯುಮ್ನ ಕೊಲೆ ಆರೋಪದ ಮೇಲೆ ಹರಿಯಾಣ ಪೊಲೀಸರು ಬಂಧಿಸಿದ್ದ...........

Published On :
ನವದೆಹಲಿ: ಸೆ. 8 ರಂದು ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನ ಏಳು ವರ್ಷದ ವಿದ್ಯಾರ್ಥಿ ಪ್ರದ್ಯುಮ್ನ ಕೊಲೆ ಆರೋಪದ ಮೇಲೆ ಹರಿಯಾಣ ಪೊಲೀಸರು ಬಂಧಿಸಿದ್ದ ಮೂವರು ಆರೋಪಿಗಳನ್ನು ಸಿಬಿಐ ಇಂದು ವಶಕ್ಕೆ ಪಡೆದಿದೆ.
ಶಾಲಾ ಬಸ್ ಕಂಡಕ್ಟರ್ ಅಶೋಕ್ ಕುಮಾರ್, ಪ್ರಾದೇಶಿಕ ಮುಖ್ಯಸ್ಥ ಫ್ರಾನ್ಸಿಸ್ ಥಾಮಸ್ ಮತ್ತು ಎಚ್ಆರ್ ಜೀಯಸ್ ಥಾಮಸ್ ಅವರನ್ನು ತನಿಖೆಗಾಗಿ ತನ್ನ ಸುಪರ್ದಿಗೆ ಪಡೆದಿದೆ.
"ಗುರುಗ್ರಾಮದ ಶಾಲೆಯಲ್ಲಿ ವಿದ್ಯಾರ್ಥಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಸಿಬಿಐ ಕೋರಿಕೆಯ ಮೇರೆಗೆ ನ್ಯಾಯಾಲಯವು ಮೂವರು ಆರೋಪಿಗಳನ್ನು ಒಂದು ದಿನದ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ" ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಕೇಂದ್ರದ ಸೂಚನೆ ಸಿಕ್ಕಿದ ನಂತರ ಗುರುಗ್ರಾಮ ಶಾಲೆಯಲ್ಲಿ ನಡೆದ ಏಳು ವರ್ಷದ ವಿದ್ಯಾರ್ಥಿಯ ಹತ್ಯೆ ತನಿಖೆಯನ್ನು ಸಿಬಿಐ ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Gurgaonಗುರುಗ್ರಾಮRyan Internationalರಯಾನ್ ಇಂಟರ್ ನ್ಯಾಷನಲ್PradyumanRyan school boy murderಪ್ರದ್ಯುಮ್ನರಯಾನ್ ಶಾಲಾ ವಿದ್ಯಾರ್ಥಿ ಹತ್ಯೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


