ದೇಶ

ದಿನಕರನ್ ಬಣದ ಎಐಎಡಿಎಂಕೆ ಸಂಸದೆಯಿಂದ ತಮಿಳುನಾಡು ಸಿಎಂಗೆ ಬೆಂಬಲ

ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಬಣದ ಸಂಸದರೊಬ್ಬರು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ....

ದಿನಕರನ್ ಬಣದ ಎಐಎಡಿಎಂಕೆ ಸಂಸದೆಯಿಂದ ತಮಿಳುನಾಡು ಸಿಎಂಗೆ ಬೆಂಬಲ
ಟಿಟಿವಿ ದಿನಕರನ್
Published On :
ಚೆನ್ನೈ: ಎಐಎಡಿಎಂಕೆ ಬಂಡಾಯ ನಾಯಕ ಟಿಟಿವಿ ದಿನಕರನ್ ಬಣದ ಸಂಸದರೊಬ್ಬರು ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಇಕೆ ಪಳನಿಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ್ದು, ಸಿಎಂಗೆ ಮತ್ತಷ್ಟು ಬಲ ಬಂದಂತಾಗಿದೆ.
ತೆಂಕಾಸಿ ಎಐಎಡಿಎಂಕೆ ಸಂಸದೆ ಎಂ ವಸಂತಿ ಅವರು ಈಗ ದಿನಕರನ್ ವಿರುದ್ಧ ತಿರುಗಿ ಬಿದ್ದಿದ್ದು, ಅಮ್ಮ ಸರ್ಕಾರ ಬೀಳಿಸಲು ಪ್ರತಿಪಕ್ಷ ಡಿಎಂಕೆಯೊಂದಿಗೆ ಟಿಟಿವಿ ದಿನಕರನ್ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಿನಕರನ್ ಅವರು ಪ್ರತಿಪಕ್ಷ ಡಿಎಂಕೆಯೊಂದಿಗೆ ಸೇರಿ ಸರ್ಕಾರ ಬೀಳಿಸುವುದಾಗಿ ಹೇಳುವುದು ಸರಿಯೇ? ಎಂದು ವಸಂತಿ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ ದಿನಕರನ್ ಅವರು ಪದೇ ಪದೆ ಈ ಮಾತು ಹೇಳುತ್ತಿದ್ದರಿಂದ ಅದು ನಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.
ಇಂದು ಮುಖ್ಯಮಂತ್ರಿ ಪಳನಿಸ್ವಾಮಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ, ಮುಖ್ಯಮಂತ್ರಿಗೆ ಮತ್ತು ಉಪ ಮುಖ್ಯಮಂತ್ರಿ ಒ ಪನ್ನೀರ್ ಸೆಲ್ವಂ ಅವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಅವರು ಜಯಲಲಿತಾ ಅವರ ಜನಪ್ರಿಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಲಿದ್ದಾರೆ ಎಂದರು.
ಇದೇ ವೇಳೆ ಮುಂದಿನ ದಿನಗಳಲ್ಲಿ ಟಿಟಿವಿ ದಿನಕರನ್ ಬಣದ ಇನ್ನಷ್ಟು ನಾಯಕರು ಸಿಎಂ ಪಳನಿಸ್ವಾಮಿ ಬೆಂಬಲಕ್ಕೆ ಬರಲಿದ್ದಾರೆ ಎಂದು ವಸಂತಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.