ದೆಹಲಿ: ಸೆಕ್ಸ್ ಗಾಗಿ ಪೀಡಿಸುತ್ತಿದ್ದ ತನ್ನ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿದ ಬಾಲಕ
16 ವರ್ಷದ ಬಾಲಕನೊಬ್ಬ ತನಗೆ ಕೆಲಸ ನೀಡಿದ್ದ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿರುವ....

Published On :
ನವದೆಹಲಿ: 16 ವರ್ಷದ ಬಾಲಕನೊಬ್ಬ ತನಗೆ ಕೆಲಸ ನೀಡಿದ್ದ ಯಜಮಾನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಕಳೆದ ಬುಧವಾರ ರಾಷ್ಟ್ರ ರಾಜಧಾನಿ ದೆಹಲಿಯ ಲಜ್ ಪತ್ ನಗರದಲ್ಲಿ ನಡೆದಿದೆ.
ಅಳುತ್ತಾ ಸಹೀಬಾಬಾದ್ ಪೊಲೀಸ್ ಠಾಣೆಗೆ ಬಂದು ಶರಣಾದ ಬಾಲ, ನಿರಂತರವಾಗಿ ಸೆಕ್ಸ್ ಗಾಗಿ ಪೀಡಿಸುತ್ತಿದ್ದ ತನ್ನ ಮನೆ ಒಡತಿಯನ್ನು ಹತ್ಯೆ ಮಾಡಿರುವುದಾಗಿ ಬಾಲಕ ಹೇಳಿಕೊಂಡಿದ್ದಾನೆ. ಕೂಡಲೇ ಪೊಲೀಸರು ಬಾಲಕನ ಸಮೇತ ನಿವಾಸಕ್ಕೆ ದೌಡಾಯಿಸಿದ್ದು ,ರಕ್ತದ ಮಡುವಿನಲ್ಲಿ ಬಿದ್ದಿದ್ದ ಶವವನ್ನು ಕಂಡಿದ್ದಾರೆ. ಈ ವೇಳೆ ಪಕ್ಕದಲ್ಲೇ ಎರಡು ವರ್ಷದ ಹೆಣ್ಣು ಮಗು ನಿದ್ರೆಯಲ್ಲಿತ್ತು ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಮಹಿಳೆಯ ಪತಿ ಕೆಲಸಕ್ಕೆ ತೆರಳಿದ್ದ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹತ್ಯೆಯ ಬಳಿಕ ರಕ್ತ ಸಿಕ್ತ ಕೈಗಳ ಸಮೇತ ಬಾಲಕ ಠಾಣೆಗೆ ಬಂದು ಶರಣಾಗಿರುವುದಾಗಿ ತಿಳಿಸಿದ್ದಾರೆ.
ನಿರಂತರ ಸೆಕ್ಸ್ ಬೇಡಿಕೆಯಿಂದ ದಿಕ್ಕು ತೋಚದಂತಾಗಿದ್ದ ಬಾಲಕ ಒಡತಿಯನ್ನು ಕೊಲೆ ಮಾಡಲು ಸಿದ್ಧವಾಗಿ, ಆಕೆ ಟಿವಿ ನೋಡುತ್ತಿದ್ದ ವೇಳೆ ಸಮಯ ಸಾಧಿಸಿ ಬರ್ಬರವಾಗಿ ಕತ್ತು ಸೀಳಿ ಕೊಲೆಗೈದಿದ್ದಾನೆ.
ಆರೋಪಿ ಬಾಲಕ ನಿರುದ್ಯೋಗಿಯಾಗಿ ಕೆಲಸವಿಲ್ಲದೆ ಅಲೆಯುತ್ತಿದ್ದಾಗ ಆತನನ್ನು ಕರೆತಂದು ಮನೆಯಲ್ಲಿ ಕೆಲಸ ನೀಡಿ ಮನೆಗೆಲಸದಲ್ಲಿ ಸಹಾಯ ಪಡೆಯುತ್ತಿದ್ದರು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


