ಪ್ರಧಾನಿ ಬೆಳೆ ವಿಮಾ ಯೋಜನೆಯಡಿ ಮಧ್ಯ ಪ್ರದೇಶದ ಈ ರೈತನಿಗೆ ಕೇವಲ 4 ರೂ. ಪರಿಹಾರ!
2016ನೇ ಸಾಲಿನ ಖಾರಿಫ್ ಋತುವಿನಲ್ಲಿ ಸೊಯಬಿನ್ ಬೆಳೆ ಕಳೆದುಕೊಂಡ ಮಧ್ಯ ಪ್ರದೇಶದ ಸೆಹೊರ್ ಜಿಲ್ಲೆಯ 52 ಮಂದಿ ರೈತರಿಗೆ .....

Published On :
ಭೋಪಾಲ್: 2016ನೇ ಸಾಲಿನ ಖಾರಿಫ್ ಋತುವಿನಲ್ಲಿ ಸೊಯಬಿನ್ ಬೆಳೆ ಕಳೆದುಕೊಂಡ ಮಧ್ಯ ಪ್ರದೇಶದ ಸೆಹೊರ್ ಜಿಲ್ಲೆಯ 52 ಮಂದಿ ರೈತರಿಗೆ ಪ್ರಧಾನ ಮಂತ್ರಿ ಬೆಳೆ ವಿಮೆ ಯೋಜನೆಯಡಿ ಸಿಕ್ಕಿದ್ದು ಕೇವಲ 3,061 ರೂಪಾಯಿ ಪರಿಹಾರ.
ಇಲ್ಲಿ ಆಸಕ್ತಿಕರ ವಿಷಯವೆಂದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರ ತವರು ಜಿಲ್ಲೆ ಸೆಹೊರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷ ಫೆಬ್ರವರಿಯಲ್ಲಿ ಮಹಾತ್ವಾಕಾಂಕ್ಷಿ ಬೆಳೆ ವಿಮೆ ಯೋಜನೆಯನ್ನು ಉದ್ಘಾಟಿಸಿದ್ದರು. ಅಲ್ಲದೆ ಇದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿದಿಶ ಎಂಬ ಲೋಕಸಭಾ ಕ್ಷೇತ್ರವಿರುವ ಜಿಲ್ಲೆಯಾಗಿದೆ.
ಅಧಿಕ ಮೊತ್ತದ ಬೆಳೆ ವಿಮೆ ಸಿಗುತ್ತದೆಂಬ ಭರವಸೆಯಲ್ಲಿದ್ದ ರೈತರಿಗೆ ಸಿಕ್ಕಿದ್ದು ಕೇವಲ ಅಲ್ಪ ಮಾತ್ರ. ಅಜಬ್ ಸಿಂಗ್ ಎಂಬ ರೈತರಿಗೆ ಕೇವಲ 43 ರೂಪಾಯಿ, 7,000 ರೂಪಾಯಿ ಮೌಲ್ಯದ ವಿಮಾ ಯೋಜನೆಗೆ 1,342ರೂಪಾಯಿ ಕಟ್ಟಿದ್ದ ಧನ್ ಪಾಲ್ ಸಿಂಗ್ ಎಂಬುವವರಿಗೆ ಸಿಕ್ಕಿದ್ದು 49 ರೂಪಾಯಿ.
ಇದೇ ರೀತಿ, ತಮ್ಮ 22 ಎಕರೆ ಜಮೀನಿನಲ್ಲಿ ಸೊಯಾಬಿನ್ ಬೆಳೆ ಬೆಳೆದ ನೀಲ ಬಾಯಿ ಎಂಬ ರೈತರಿಗೆ ಸಿಕ್ಕಿದ ಪರಿಹಾರ ವಿಮೆ ಮೊತ್ತ 192 ರೂಪಾಯಿ 24 ಪೈಸೆ. ಅವರು 5,220 ರೂಪಾಯಿ ಪ್ರೀಮಿಯಂ ಕಟ್ಟಿದ್ದರು.
ಪ್ರಧಾನ ಮಂತ್ರಿ ಫ್ಲಾಗ್ ಶಿಪ್ ಕಾರ್ಯಕ್ರಮದಡಿ ಬಾದಾಮಿ ಲಾಲ್ ಎಂಬ ರೈತರು ಕೇವಲ 4 ರೂಪಾಯಿ 70 ಪೈಸೆ ಪಡೆದುಕೊಂಡಿದ್ದಾರೆ.
ಪ್ರಾಥಮಿಕ ಸಹಕಾರಿ ಸಮಿತಿಯ ವ್ಯವಸ್ಥಾಪಕ ಕೃಪರಾಮ್ ಮಾಲ್ವಿಯಾ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿ, ಸೆಹೊರೆ ಜಿಲ್ಲೆಯ ತಿಲಾದಿಯಾ ಗ್ರಾಮದ 52 ಮಂದಿ ರೈತರಿಗೆ 3,061 ರೂಪಾಯಿ 50 ಪೈಸೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇಷ್ಟು ಸಣ್ಣ ಮೊತ್ತದ ಪರಿಹಾರ ಸಿಕ್ಕಿದ್ದಕ್ಕಾಗಿ ರೈತರು ಚೆಕ್ ಮೂಲಕ ತೆಗೆದುಕೊಳ್ಳದೆ ತಮ್ಮ ಕಿಸಾನ್ ಕ್ರೆಡಿಟ್ ಕಾರ್ಡ್ ಪಾವತಿಯಿಂದ ಪಡೆದ ಪರಿಹಾರವನ್ನು ಡೆಬಿಟ್ ಮಾಡುವಂತೆ ಹೇಳಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
FarmerರೈತರುMadhya Pradeshಮಧ್ಯ ಪ್ರದೇಶSehore districtPrime minister Crop Insurence schemeಸೆಹೊರ್ ಜಿಲ್ಲೆ.ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


