ಎನ್ ಐಎ ನೂತನ ನಿರ್ದೇಶಕರಾಗಿ ವೈಸಿ ಮೋದಿ ನೇಮಕ!
ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನೂತನ ನಿರ್ದೇಶಕರಾಗಿ ವೈಸಿ ಮೋದಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.

ನವದೆಹಲಿ: ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ನೂತನ ನಿರ್ದೇಶಕರಾಗಿ ವೈಸಿ ಮೋದಿ ಅವರನ್ನು ಸೋಮವಾರ ನೇಮಕ ಮಾಡಲಾಗಿದೆ.
ಹಾಲಿ ನಿರ್ದೇಶಕ ಶರದ್ ಕುಮಾರ್ ಅವರು 2018ರ ಅಕ್ಟೋಬರ್ 30ರಂದು ನಿವೃತ್ತರಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆ ವೈಸಿ ಮೋದಿ ಅವರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಿದೆ. 2002ರ ಗುಜರಾತ್ ಗಲಭೆ ಪ್ರಕರಣದ ತನಿಖೆಗಾಗಿ ಸುಪ್ರೀಂಕೋರ್ಟ್ ನೇಮಿಸಿದ್ದ ವಿಶೇಷ ತನಿಖಾದಳ ನೇತೃತ್ವವನ್ನು ಇದೇ ವೈಸಿ ಮೋದಿ ಅವರಿಗೆ ವಹಿಸಲಾಗಿತ್ತು. ಈ ಹಿಂದೆ 2015ರಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ)ದ ಹೆಚ್ಚುವರಿ ನಿರ್ದೇಶಕರಾಗಿ ವೈಸಿ ಮೋದಿ ನೇಮಕವಾಗಿದ್ದರು.
ತಮ್ಮ ದಕ್ಷತೆ ಹಾಗೂ ಪಾರದರ್ಶಕ ತನಿಖೆಯಿಂದ ಖ್ಯಾತಿಗಳಿಸಿದ್ದ ವೈಸಿ ಮೋದಿ ಅವರ ಹೆಗಲಿಗೆ ಇದೀಗ ರಾಷ್ಟ್ರೀಯ ತನಿಖಾದಳದ ನಿರ್ದೇಶಕತ್ವ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


