ರಾಯಲಸೀಮಾ: ಬರ ಪೀಡಿತ ರೈತರಿಂದ ಪ್ರಧಾನಿ ಮೋದಿಗೆ 68 ಪೈಸೆಯ 400 ಚೆಕ್!
ಬರ ಪೀಡಿತ ರಾಯಲಸೀಮ ಪ್ರಾಂತ್ಯದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ 68 ಪೈಸೆಗಳ 400 ಚೆಕ್...

Published On :
ಹೈದರಾಬಾದ್: ಬರ ಪೀಡಿತ ರಾಯಲಸೀಮ ಪ್ರಾಂತ್ಯದ ರೈತರು ಪ್ರಧಾನಿ ನರೇಂದ್ರ ಮೋದಿ ಅವರ 67ನೇ ಹುಟ್ಟುಹಬ್ಬದ ವಿಶೇಷ ಉಡುಗೊರೆಯಾಗಿ 68 ಪೈಸೆಗಳ 400 ಚೆಕ್ ಗಳನ್ನು ಕಳುಹಿಸಿದ್ದಾರೆ.
ರಾಯಲಸೀಮೆ ಪ್ರಾಂತ್ಯದ ರೈತರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ರಾಯಲಸೀಮಾ ಸಗುಣೀತಿ ಸಾಧನಾ ಸಮಿತಿ(ಆರ್ಎಸ್ಎಸ್ಎಸ್) ಎಂಬ ಸರ್ಕಾರೇತರ ಸೇವಾ ಸಂಘಟನೆಯು ರೈತರ ಪರವಾಗಿ ಪ್ರಧಾನಿ ಮೋದಿ ಅವರಿಗೆ ತಲಾ 68 ಪೈಸೆಗಳ 400 ಚೆಕ್ ಗಳನ್ನು ಕಳುಹಿಸಿಕೊಟ್ಟಿದ್ದು ನಿಮ್ಮ ಹುಟ್ಟುಹಬ್ಬಕ್ಕೆ ನಮ್ಮಿಂದ ಕೊಡಲು ಸಾಧ್ಯವಿರುವ ಗರಿಷ್ಠ ಉಡುಗೊರೆಯಾಗಿದೆ ಎಂದು ರೈತರು ಹೇಳಿದ್ದಾರೆ.
ರಾಯಲಸೀಮೆ ಪ್ರಾಂತ್ಯದ ನಾಲ್ಕು ಜಿಲ್ಲೆಗಳಾದ ಕಡಪ, ಅನಂತಪುರ, ಕರ್ನೂಲ್ ಮತ್ತು ಚಿತ್ತೂರು ಬರ ತಾಂಡವವಾಡುತ್ತಿದೆ. ಇಲ್ಲಿನ ರೈತಾಪಿ ಜನರ ದಯನೀಯ ಪರಿಸ್ಥಿತಿಯನ್ನು ಪ್ರಧಾನಿಗೆ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ಮನವರಿಕೆ ಮಾಡಿಕೊಡುವುದಕ್ಕೆ ಈ ರೀತಿ ಮಾಡಿರುವುದಾಗಿ ಸಂಘಟನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


