ಪೆಟ್ರೋಲ್ ಖರೀದಿಸುವವರು ಯಾರೂ ಉಪವಾಸ ಇರಲ್ಲ: ಕೇಂದ್ರ ಸಚಿವ ಅಲ್ಫೋನ್ಸ್
"ಪೆಟ್ರೋಲ್ ಖರೀದಿಸುವವರು ಯಾರೂ ಹಸಿವಿನಿಂದ ಪೀಡಿತರಾಗಿರುವುದಿಲ್ಲ. ಅವರಾರೂ ಉಪವಾಸ ಇರುವುದಿಲ್ಲ." ಎಂದು ಕೇಂದ್ರ ಸಚಿವ ಕೆ.ಜೆ.ಅಲ್ಫೋನ್ಸ್ ಹೇಳಿದರು.

Published On :
ತಿರುವನಂತಪುರಂ: "ಪೆಟ್ರೋಲ್ ಖರೀದಿಸುವವರು ಯಾರೂ ಹಸಿವಿನಿಂದ ಪೀಡಿತರಾಗಿರುವುದಿಲ್ಲ. ಅವರಾರೂ ಉಪವಾಸ ಇರುವುದಿಲ್ಲ." ಎಂದು ಕೇಂದ್ರ ಸಚಿವ ಕೆ.ಜೆ.ಅಲ್ಫೋನ್ಸ್ ಹೇಳಿದರು.
"ಯಾರು ಕಾರು, ಬೈಕ್ ಗಳನ್ನು ಹೊಂದಿದ್ದಾರೋ ಅವರು ಪೆಟ್ರೋಲ್ ಗಾಗಿ ಹಣ ಪಾವತಿಸಬೇಕಾಗುತ್ತದೆ. ಯಾರಿಗೆ ಇಷ್ಟು ಹಣ ಕೊಡುವುದಕ್ಕೆ ಸಾಧ್ಯ ಇಲ್ಲವೋ ಕೊಡುವುದು ಬೇಡ" ಎಂದಿರುವ ಅಲ್ಫೋನ್ಸ್ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ.
"ಸಮಾಜದಲ್ಲಿರುವ ತಳ ವರ್ಗದ ಜನರ ಏಳ್ಗೆಗಾಗಿ ಬಹಳ ಹಣ ಬೇಕಾಗುತ್ತದೆ. ಯಾರಿಗೆ ಹಣ ತೆರಲು ಸಾಧ್ಯವಿದೆಯೋ ಅಂಥವರಿಗೆ ತೆರಿಗೆ ಹಾಕುತ್ತೇವೆ. ತೆರಿಗೆ ಹಾಕುತ್ತಿರುವುದರಿಂದ ಬಡವರು ಗೌರವಯುತವಾಗಿ ಬದುಕಲು ಸಾಧ್ಯವಾಗುತ್ತಿದೆ. ತೆರಿಗೆಯಿಂದ ಸಂಗ್ರಹಿಸುತ್ತಿರುವ ಹಣವನ್ನು ಕದ್ದುಕೊಂಡು ಹೋಗಲ್ಲ" ಎಂದಿದ್ದಾರೆ.
ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಕಣ್ಣಂತನಮ್ ಕಳೆದ ಜುಲೈನಿಂದ ಈಚೆಗೆ ಪೆಟ್ರೋಲ್ ಬೆಲೆ ಆರು ರುಪಾಯಿ ಏರಿಕೆಯಾಗಿದೆ. ಸದ್ಯದ ಪೆಟ್ರೋಲ್ ದರವು ಮೂರು ವರ್ಷದ ಹಿಂದೆ ಇದ್ದಷ್ಟು ಇದೆ. ಇದೇಕೆ ಹೀಗಾಗುತ್ತಿದೆ ಎನ್ನುವುದಕ್ಕೆ ತಿರುವನಂತಪುರಂ ನಲ್ಲಿ ಮೇಲಿನಂತೆ ವಿವರಣೆ ನಿಡೀದರು.
ಕೆಲವು ದಿನಗಳ ಹಿಂದೆ ಗೋಹತ್ಯೆ ವಿಚಾರದಲ್ಲಿ ಸಚಿವರು ನೀಡಿದ್ದ ಹೇಳಿಕೆಯೂ ವಿವಾದಕ್ಕೆ ಕಾರಣವಾಗಿತ್ತು ಎನ್ನುವುದನ್ನು ನಾವಿಲ್ಲಿ ನೆನೆಯಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Petrolಪೆಟ್ರೋಲ್Union Ministerಕೇಂದ್ರ ಸಚಿವAlphons KannanthanamCentral Tourism Ministerdiesel fuel priceಆಲ್ಫೋನ್ಸ್ ಕಣ್ಣಂತನಮ್ಕೇಂದ್ರ ಪ್ರವಾಸೋದ್ಯಮ ಸಚಿವಡೀಸೆಲ್ ಇಂಧನ ಬೆಲೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


