ದೇಶ

ರಜನಿ ರಾಜಕೀಯಕ್ಕೆ ಬರುವುದಾದರೆ ಅವರೊಂದಿಗೆ ಕೆಲಸ ಮಾಡಲು ಸಿದ್ಧ: ನಟ ಕಮಲ್ ಹಾಸನ್

ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿರುವ ನಟ ಕಮಲ್ ಹಾಸನ್ ಅವರು, ಒಂದು ವೇಳೆ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಿದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆಂದು...

ರಜನಿ ರಾಜಕೀಯಕ್ಕೆ ಬರುವುದಾದರೆ ಅವರೊಂದಿಗೆ ಕೆಲಸ ಮಾಡಲು ಸಿದ್ಧ: ನಟ ಕಮಲ್ ಹಾಸನ್
ರಜನಿಕಾಂತ್ ಹಾಗೂ ನಟ ಕಮಲ್ ಹಾಸನ್
Published On :
ಚೆನ್ನೈ: ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿರುವ ನಟ ಕಮಲ್ ಹಾಸನ್ ಅವರು, ಒಂದು ವೇಳೆ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಿದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆಂದು ಶುಕ್ರವಾರ ಹೇಳಿದ್ದಾರೆ. 
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಚಿತ್ರರಂಗದಲ್ಲಿ ನಾವು ಎದುರಾಳಿ ಆದರೂ, ಮಹತ್ವದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅದು ರಾಜಕೀಯಕ್ಕೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ. 
ಇದೇ ವೇಳೆ ತಮಿಳುನಾಡು ಶಾಸಕರ ರೆಸಾರ್ಟ್ ವಾಸದ ವಿರುದ್ಧ ಕಿಡಿಕಾಡಿರುವ ಅವರು, ಜನ ಪ್ರತಿನಿಧಿಗಳಾಗಿರುವವರು ಸಹ ಕೆಲಸ ನಿರ್ವಹಿಸದಿದ್ದರೆ ವೇತನವಿಲ್ಲ (ನೋ ವರ್ಕ್, ನೋ ಪೇ) ಎಂಬ ನಿಯಮದ ವ್ಯಾಪ್ತಿಗೊಳಪಡಬೇಕು. ಇದು ಕೇವಲ ಸರ್ಕಾರದ ನೌಕರರಿಗೆ ಮಾತ್ರವೇ ಅನ್ವಯಿಸುತ್ತದೆಯೇ? ಅವರು ರೆಸಾರ್ಟ್ ರಾಜಕಾರಣದಲ್ಲೇ ಕಾಲ ಕಳೆಯುತ್ತಾರಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.