ದೇಶ

ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಇಂದು ನರೇಂದ್ರ ಮೋದಿ, ಶಿಂಜೋ ಅಬೆ ಚಾಲನೆ!

ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರ ಅಹ್ಮದಾಬಾದ್ ನಲ್ಲಿ ಚಾಲನೆ ನೀಡಲಿದ್ದಾರೆ.

ಭಾರತದ ಮೊಟ್ಟಮೊದಲ ಬುಲೆಟ್ ರೈಲು ಯೋಜನೆಗೆ ಇಂದು ನರೇಂದ್ರ ಮೋದಿ, ಶಿಂಜೋ ಅಬೆ ಚಾಲನೆ!
ಜಪಾನ್ ಪ್ರಧಾನಿ ಶಿಂಜೋ ಅಬೆ ಹಾಗೂ ಬುಲೆಟ್ ರೈಲು
Published On :
ಅಹ್ಮದಾಬಾದ್: ಭಾರತದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೋ ಅಬೆ ಗುರುವಾರ ಅಹ್ಮದಾಬಾದ್ ನಲ್ಲಿ ಚಾಲನೆ ನೀಡಲಿದ್ದಾರೆ.
ಗುಜರಾತ್ ನ ಅಹ್ಮದಾಬಾದ್ ನಿಂದ ಮುಂಬೈಗೆ ಪ್ರಪ್ರಥಮ ಬುಲೆಟ್ ರೈಲು ಸಂಚಾರ ಮಾಡಲಿದ್ದು, ಈ ಯೋಜನೆ ಪೂರ್ಣಗೊಳ್ಳಲು 2022ರವರೆಗೂ ಕಾಲಮಿತಿ ವಿಧಿಸಲಾಗಿದೆ. ಎರಡು ಪ್ರಮುಖ ನಗರಗಳ ನಡುವಿನ ಸುಮಾರು  500 ಕಿ.ಮೀ ದೂರದ ಬುಲೆಟ್ ರೈಲು ಯೋಜನೆಗೆ ಇಂದು ಉಭಯ ನಾಯಕರು ಅಡಿಗಲ್ಲು ಹಾಕುವ ಮೂಲಕ ಚಾಲನೆ ನೀಡಲಿದ್ದಾರೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಈ ಯೋಜನೆ ಪೂರ್ಣಗೊಂಡ ಬಳಿಕ ಕೇವಲ 2 ಗಂಟೆಗಳಲ್ಲಿ  ಅಹ್ಮದಾಬಾದ್ ನಿಂದ ಮುಂಬೈ ಸಂಚರಿಸಬಹುದಾಗಿದೆ.

ಈ ಬೃಹತ್ ಯೋಜನೆ ಒಟ್ಟು 108 ಲಕ್ಷ ಕೋಟಿ ಹಣ ಖರ್ಚಾಗಲಿದ್ದು, ಜಪಾನ್ ಸರ್ಕಾರ ಈ ಯೋಜನೆಗಾಗಿ ಶೇ.81 ರಷ್ಟು ಅಂದರೆ ಸುಮಾರು 88 ಸಾವಿರ ಕೋಟಿ ಹಣ ಸಾಲ ನೀಡಲು ಸಿದ್ಧವಾಗಿದೆ. ಇಂತಹ ಸಾಲಗಳಿಗೆ  ವಿಶ್ವಬ್ಯಾಂಕ್ ವಾರ್ಷಿಕ ಶೇ.5 ರಿಂದ 7ರವರೆಗೂ  ಬಡ್ಡಿ ವಿಧಿಸುತ್ತದೆ. ಆದರೆ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ಹಾಲಿ ಬುಲೆಟ್ ರೈಲು ಯೋಜನೆ ಭಾರತ-ಜಪಾನ್ ಸ್ನೇಹದ ದ್ಯೋತಕವಾಗಿರುವುದರಿಂದ ಶೇ.0.1ರಷ್ಟು  ಬಡ್ಡಿದರಕ್ಕೆ ಸಾಲ ನೀಡಿದ್ದಾರೆ.

ವಿಶ್ವ ಬ್ಯಾಂಕ್ ಸಾಲದ ಗಡುವು 25-35 ವರ್ಷಗಳಾಗಿದೆ, ಜಪಾನ್ ಸರ್ಕಾರ ಭಾರತಕ್ಕೆ 15 ವರ್ಷಗಳ ಹೆಚ್ಚುವರಿ ಕಾಲ ಮಿತಿಯನ್ನೂ ನೀಡಿದೆ. ಅದರಂತೆ ಭಾರತ ಸರ್ಕಾರ 50 ವರ್ಷಗಳಲ್ಲಿ ಈ ಸಾಲವನ್ನು ಜಪಾನ್ ಸರ್ಕಾರಕ್ಕೆ  ವಾಪಸ್ ಮಾಡಬೇಕಿದೆ.  ಇನ್ನು ಉಭಯ ನಾಯಕರು ಈ ಬುಲೆಟ್ ರೈಲು ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಗಾಂಧಿ ನಗರದಲ್ಲಿ ನಡೆಯುವ 12ನೇ ಇಂಡೋ-ಜಪಾನ್ ವಾರ್ಷಿಕ ಸಮಿತ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.