ಬ್ರಿಟನ್ ಸರ್ಕಾರದಿಂದ ದಾವೂದ್ ಇಬ್ರಾಹಿಂ ಗೆ ಸೇರಿದ ಭಾರೀ ಮೊತ್ತದ ಆಸ್ತಿ ಮುಟ್ಟುಗೋಲು
ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ ದಾವೂದ್ ಇಬ್ರಾಹಿಂ ಒಡೆತನದ 6.7 ಬಿಲಿಯನ್ ದಾಲರ್ ಮೌಲ್ಯದ ಆಸ್ತಿಯನ್ನು ಬ್ರಿಟನ್ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ.

Published On :
ಲಂಡನ್ : ಭಾರತದ ಮೋಸ್ಟ್ ವಾಂಟೆಡ್ ಅಪರಾಧಿ ದಾವೂದ್ ಇಬ್ರಾಹಿಂ ಒಡೆತನದ 6.7 ಬಿಲಿಯನ್ ದಾಲರ್ ಮೌಲ್ಯದ ಆಸ್ತಿಯನ್ನು ಬ್ರಿಟನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
2015ರಲ್ಲಿ ಭಾರತ ಸರ್ಕಾರ ಲಂಡನ್ ನಲ್ಲಿ ಇರುವ ದಾವೂದ್ ನ ಆಸ್ತಿಗಳ ಸಮಗ್ರ ಮಾಹಿತಿಯನ್ನು ಬ್ರಿಟನ್ ಸರ್ಕಾರಕ್ಕೆ ನೀಡಿತ್ತು.
ಪಾಕಿಸ್ಥಾನದ ಕರಾಚಿಯಲ್ಲಿ ಮೂರು ಅಧಿಕೃತ ವಿಳಾಸಗಳಲ್ಲಿ ನೆಲೆಸಿದ್ದಾನೆ ಎಂದು ತಿಳಿಯಲಾಗಿರುವ ದಾವೂದ್ ಗೆ ಬ್ರಿಟನ್‌ನಲ್ಲಿ ಭಾರಿ ಆಸ್ತಿಗಳಿವೆ. ಅದರಲ್ಲಿ 6.7 ಬಿಲಿಯನ್ ದಾಲರ್ ಮೌಲ್ಯದ ಆಸ್ತಿಯನ್ನು ಇದೀಗ ಬ್ರಿಟನ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಬ್ರಿಟನ್ ನ ವಾರ್ಕ್ ವಿಕ್ ಶಯರ್ ನಲ್ಲಿ ದಾವೂದ್ ಗೆ ಸೇರಿದ ಬೃಹತ್ ಹೊಟೇಲ್ ಇದೆ. ಅಂತೆಯೇ ಮಿಡ್ ಲ್ಯಾಂಡ್ಸ್ ಆದ್ಯಂತ ಆತನಿಗೆ ಸೇರಿದ ಹಲವಾರು ವಸತಿ ಸಮುಚ್ಚಯಗಳು ಇವೆ ಎಂದು ತಿಳಿದು ಬಂದಿದೆ. ದಾವೂದ್ ಗೆ ಅಲ್ ಕೈದಾ ನಂಟು ಇರುವುದು ಬಹಿರಂಗವಾಗಿದೆ.
ಬ್ರಿಟನ್ ಸರ್ಕಾರ ಸಿದ್ಧಪಡಿಸಿರುವ ಹಣಕಾಸು ನಿಷೇಧಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಪ್ರಜೆಯಾಗಿರುವ ದಾವೂದ್ 21 ಬೇರೆ ಬೇರೆ ಹೆಸರನ್ನು ಹೊಂದಿರುವ ಭೂಗತ ಜಗತ್ತಿನ ಡಾನ್ ಆಗಿದ್ದಾನೆ. 1993 ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿಯಾಗಿದ್ದು ಅಂದಿನಿಂದಲೂ ಆತ ತಲೆಮರೆಸಿಕೊಂಡಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Dawood IbrahimBritish Governmentfrozen propertiesIndian underworld gangster Dawood1993 Mumbai serial bomb blastsಭಾರತ ಮೋಸ್ಟ್ ವಾಂಟೆಡ್ ಅಪರಾಧಿ ದಾವೂದ್ ಇಬ್ರಾಹಿಂಆಸ್ತಿ ಮುಟ್ಟ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


