ಗುರ್ಮಿತ್ ರಾಮ್ ರಹೀಂ 'ಲೈಂಗಿಕ ವ್ಯಸನಿ': ರೋಹ್ಟಕ್ ಜೈಲು ವೈದ್ಯಾಧಿಕಾರಿಗಳ ಹೇಳಿಕೆ!
ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರಿ ಬಾಬಾ ರಾಮ್ ರಹೀಂ ನನ್ನು ಪರೀಕ್ಷಿಸಿದ ರೋಹ್ಟಕ್ ಜೈಲ ವೈದ್ಯಾಧಿಕಾರಿಗಳು, ಬಾಬಾ ರಾಮ್ ರಹೀಂ ಲೈಂಗಿಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ.

Published On :
ರೋಹ್ಟಕ್: ಮಹತ್ವದ ಬೆಳವಣಿಗೆಯಲ್ಲಿ ಅತ್ಯಾಚಾರಿ ಬಾಬಾ ರಾಮ್ ರಹೀಂ ನನ್ನು ಪರೀಕ್ಷಿಸಿದ ರೋಹ್ಟಕ್ ಜೈಲ ವೈದ್ಯಾಧಿಕಾರಿಗಳು, ಬಾಬಾ ರಾಮ್ ರಹೀಂ ಲೈಂಗಿಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣ ಸಂಬಂಧ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪಿನ ಬಳಿಕ ಜೈಲುಪಾಲಾಗಿರುವ ಬಾಬಾ ರಾಮ್ ರಹೀಂ ಜೈಲಿನಲ್ಲಿ ಅನಾರೋಗ್ಯಕ್ಕೀಡಾಗಿದ್ದ, ಈ ವೇಳೆ ಜೈಲು ಅಧಿಕಾರಿಗಳು ಜೈಲಿನ ವೈದ್ಯರನ್ನು ಕರೆಯಿಸಿ ಪರೀಕ್ಷೆ ನಡೆಸಿದ್ದು, ಈ ವೇಳೆ ರಾಮ್ ರಹೀಂ ಲೈಂಗಿಕ ವ್ಯಸನಿ ಎಂಬ ವಿಚಾರವನ್ನು ವೈದ್ಯರು ಬಹಿರಂಗ ಪಡಿಸಿದ್ದಾರೆ. ಇದಲ್ಲದೆ ಬಾಬಾ ರಾಮ್ ರಹೀಂಗೆ ಸಕ್ಕರೆ ಖಾಯಿಲೆ ಇದ್ದು, ಬಿಪಿ ಕೂಡ ಇದೆ ಎಂದು ಹೇಳಿದ್ದಾರೆ.
ಇನ್ನು ರಾಮ್ ರಹೀಂ ಅನಾರೋಗ್ಯಕ್ಕೆ ವೈದ್ಯರು ಹೇಳಿರುವ ಕಾರಣಗಳು ಬೆಚ್ಚಿ ಬೀಳಿಸುವಂತಿದ್ದು. ಡೇರಾ ಸಚ್ಚಾ ಸೌಧ ಆಶ್ರಮದಲ್ಲಿದ್ದಾಗ ನಿತ್ಯ ರಾಮ್ ರಹೀಂ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದ. ಆದರೆ ಜೈಲಿಗೆ ಬಂದ ಬಳಿಕ ಆತನ ದೈಹಿಕ ಒತ್ತಡಗಳ ನಿವಾರಣೆಯಾಗುತ್ತಿಲ್ಲ. ಹೀಗಾಗಿ ಆತ ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾನೆ ಮತ್ತು ಬಳಲಿದಂತೆ ಕಾಣುತ್ತಿದ್ದಾನೆ. ಇದನ್ನು ಹೊರತು ಪಡಿಸಿ ಆತನಿಗೆ ಇನ್ನಾವುದೇ ಆನಾರೋಗ್ಯ. ತೊಂದರೆ ಇಲ್ಲ. ಸಕ್ಕರೆ ಮತ್ತು ಬಿಪಿ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಆತ ತನ್ನ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳು ಸಾಧ್ಯವಾಗದೇ ಇರುವುದರಿಂದ ಆತ ತೀವ್ರ ಒತ್ತಡಕ್ಕೆ ಒಳಗಾಗಿದ್ದಾನೆ. ಪ್ರಸ್ತುತ ಆತನಿಗೆ ಕೆಲ ಔಷಧಿಗಳನ್ನು ನೀಡಲಾಗಿದ್ದು, ಶೀಘ್ರ ಗುಣಮುಖನಾಗುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ. ಆದರೆ ರಾಮ್ ರಹೀಂ ಮಾದಕ ವಸ್ತುಗಳನ್ನು ಸೇವಿಸುತ್ತಿದ್ದನೆ ಎಂಬುದನ್ನು ಖಚಿತವಾಗಿ ಹೇಳದ ವೈದ್ಯರು, ಈ ಬಗ್ಗೆ ಕೆಲ ಪರೀಕ್ಷೆಗಳ ಅಗತ್ಯವಿದೆ ಎಂದು ಮಾತ್ರ ಹೇಳಿದ್ದಾರೆ.
ಈ ಹಿಂದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ತಾನು ಲೈಂಗಿಕ ದುರ್ಬಲ ಎಂದು ಹೇಳಿಕೊಳ್ಳುವ ಮೂಲಕ ರಾಮ್ ರಹೀಂ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ. ರಾಮ್ ರಹೀಂ ಹೇಳಿಕೆಯನ್ನು ಖಂಡಿಸಿದ್ದ ನ್ಯಾಯಾಲಯ ನೀನು ಲೈಂಗಿಕ ದುರ್ಬಲನಾಗಿದ್ದರೆ ನಿನ್ನ ಮಕ್ಕಳು ನಿನ್ನವರು ಅಲ್ಲವೇ ಎಂದು ಪ್ರಶ್ನೆ ಮಾಡಿತ್ತು. ಇದೀಗ ಸ್ವತಃ ವೈದ್ಯರೇ ರಾಮ್ ರಹೀಂ ಲೈಂಗಿಕ ವ್ಯಸನಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Haryanaಹರ್ಯಾಣrape caseಅತ್ಯಾಚಾರ ಪ್ರಕರಣRohtakGurmeet Ram Rahimರೋಹ್ಟಕ್sex addictಗುರ್ಮಿತ್ ರಾಮ್ ರಹೀಂ ಸಿಂಗ್ಲೈಂಗಿಕ ವ್ಯಸನಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಬ್ರೇಕಿಂಗ್ ನ್ಯೂಸ್
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?ರಾಹುಕಾಲ ಎಂದರೇನು? ಮದುವೆಗೆ ಅನ್ವಯಿಸುತ್ತದೆಯೇ? ರಾಹು ಶಾಂತಿಗಾಗಿ ನಿಂಬೆ ಹಣ್ಣು ದೀಪ ಹಚ್ಚುವುದು ಸೂಕ್ತವೇ?ಗೌರಿಬಿದನೂರಿನ ಮಣ್ಣಲ್ಲಿ ಅರಳಿದ ಮರುಭೂಮಿ ಹಣ್ಣು: ಅಸಾಧ್ಯವನ್ನು ಸಾಧ್ಯವಾಗಿಸಿದ ಹಠವಾದಿ; ಸ್ವಾವಲಂಬಿ ಕೃಷಿಗೆ ಹೊಸ ಭಾಷ್ಯ ಬರೆದ ದಿವಾಕರ್ ಚನ್ನಪ್ಪ..!ಕರ್ನಾಟಕದ ನಂ.1 ಶ್ರೀಮಂತ ಯಾರು ಗೊತ್ತಾ? ಅಂಬಾನಿ, ಅದಾನಿ ಬಿಡಿ; ಇಲ್ಲಿದೆ ನಮ್ಮ ಕರುನಾಡ ಸಿರಿವಂತರ ಟಾಪ್ ಲಿಸ್ಟ್!ಫ್ಯಾಟ್ ನಿಂದ ಫಿಟ್ ವರೆಗೆ: ಸಾಹೇಬಲಾಲ್ ಛಪ್ಪರ್ಬಂದ್ ಸ್ಫೂರ್ತಿದಾಯಕ ಪಯಣವಿದೇಶಿ ಪ್ರವಾಸದ ಪ್ಲ್ಯಾನ್ ಇದೆಯೇ? ಒಂದು ಸಣ್ಣ ತಪ್ಪು ಭಾರೀ ದಂಡಕ್ಕೆ ಕಾರಣವಾಗಬಹುದು; ಪ್ರವಾಸಿಗರು ತಿಳಿದಿರಲೇಬೇಕಾದ ನಿಯಮಗಳಿವು...!ಮನಸ್ಸಿದ್ದರೆ ಮಾರ್ಗ ಎಂಬುದನ್ನು ರುಜುವಾತು ಮಾಡಿದ ಛಲವಾದಿ; 27 ವರ್ಷಗಳ ಹೋರಾಟದಲ್ಲಿ 26 ಬಾರಿ ಸೋತು 59ನೇ ವಯಸ್ಸಿನಲ್ಲಿ ಸರ್ಕಾರಿ ಶಿಕ್ಷಕರಾದ ವಿಜಯ್ಪಶ್ಚಿಮ ಘಟ್ಟಗಳ ESA - ಕಸ್ತೂರಿರಂಗನ್ ವರದಿ ಇನ್ನೂ ಏಕೆ ಜಾರಿಗೆ ಬಂದಿಲ್ಲ?


