ದೇಶ

ನಾವು ನಮ್ಮ ದೇಶವನ್ನು ಗಲೀಜು ಮಾಡಿದರೆ, ನಮಗೆ 'ವಂದೇ ಮಾತರಂ' ಹೇಳುವ ಹಕ್ಕಿದೆಯೇ?: ಪ್ರಧಾನಿ ಮೋದಿ

ನಾವು ನಮ್ಮ ದೇಶವನ್ನು ಗಲೀಜು ಮಾಡಿದರೆ, ನಮಗೆ 'ವಂದೇ ಮಾತರಂ' ಹೇಳುವ ಹಕ್ಕು ಇದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ...

ನಾವು ನಮ್ಮ ದೇಶವನ್ನು ಗಲೀಜು ಮಾಡಿದರೆ, ನಮಗೆ 'ವಂದೇ ಮಾತರಂ' ಹೇಳುವ ಹಕ್ಕಿದೆಯೇ?: ಪ್ರಧಾನಿ ಮೋದಿ
ನರೇಂದ್ರ ಮೋದಿ
Published On :
ನವದೆಹಲಿ: ನಾವು ನಮ್ಮ ದೇಶವನ್ನು ಗಲೀಜು ಮಾಡಿದರೆ, ನಮಗೆ 'ವಂದೇ ಮಾತರಂ' ಹೇಳುವ ಹಕ್ಕು ಇದೆಯೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಶ್ನಿಸಿದ್ದಾರೆ. 
ಇನ್ನು ರಸ್ತೆಗಳಲ್ಲಿ ಪಾನ್ ಜಗಿದು ಉಗಿಯುವವರು ಹಾಗೂ ಕಸ ಹಾಕುವವರಿಗೆ ವಂದೇ ಮಾತರಂ ಹೇಳುವ ಹಕ್ಕು ಇದೆಯಾ? ಎಂದು ಪ್ರಶ್ನಿಸಿದ ಅವರು ರಸ್ತೆಗಳು ಹಾಗೂ ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಕಾರ್ಮಿಕರಿಗೆ ವಂದೇ ಮಾತರಂ ಹೇಳುವ ಮೊದಲ ಹಕ್ಕಿದೆ ಎಂದರು. 
ಷಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಸರ್ವ ಧರ್ಮ ಸಮ್ಮೇಳನವನ್ನುದ್ದೇಶಿಸಿ ಭಾಷಣ ಮಾಡಿದ 125ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ವಿಜ್ಞಾನ ಭವನದಲ್ಲಿ ಮಾತನಾಡಿದ ಅವರು, ಭಾರತ ಇಂದು ಏನಾಗಿದೆ ಎಂಬುದರ ಮೇಲೆ ಜಗತ್ತು ನಮ್ಮನ್ನು ಅಳೆಯುತ್ತದೆಯೇ ವಿನಃ 5 ಸಾವಿರ ವರ್ಷಗಳ ಹಿಂದೆ ಅಥವಾ ಭಗವಂತ ರಾಮ ಹಾಗೂ ಬೌದ್ಧರ ಕಾಲದಲ್ಲಿ ಹೇಗಿತ್ತು ಎಂಬುದರ ಆಧಾರದಲ್ಲಿ ಅಲ್ಲ. ಹೀಗಾಗಿ ಯುವ ಜನತೆ ತಮ್ಮ ಕೌಶಲ್ಯವನ್ನು ನವ ಭಾರತ ನಿರ್ಮಾಣಕ್ಕಾಗಿ ಬಳಸಿಕೊಳ್ಳಬೇಕು ಎಂದರು. 
ಇನ್ನು ವಿವೇಕಾನಂದರು ಪ್ರಯೋಗಶೀಲತೆ ಮತ್ತು ಅನ್ವೇಷಣೆಗೆ ಬೆಂಬಲ ನೀಡಿದ್ದರು. ಅವರ ಅಂತಹ ಆದರ್ಶಗಳ ತಳಹದಿಯಲ್ಲೇ ಎನ್ಡಿಎ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.