ದೇಶ

ಗುರುಗಾಂವ್ ಶಾಲಾ ಬಾಲಕನ ಹತ್ಯೆ: ಶಾಲೆಯ ಪಕ್ಕದಲ್ಲಿದ್ದ ಮದ್ಯದಂಗಡಿಗೆ ಬೆಂಕಿಯಿಟ್ಟ ಉದ್ರಿಕ್ತರು

ಗುರುಗಾಂವ್ ನ ರಿಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆಯ ಕಾವು ಜೋರಾಗಿದ್ದು ಪ್ರತಿಭಟನಾಕಾರರು ಶಾಲೆಯ ಪಕ್ಕದಲ್ಲಿದ್ದ ಮದ್ಯದಂಗಡಿಗೆ ಬೆಂಕಿ ಹಚ್ಚಿದ್ದಾರೆ...

ಗುರುಗಾಂವ್ ಶಾಲಾ ಬಾಲಕನ ಹತ್ಯೆ: ಶಾಲೆಯ ಪಕ್ಕದಲ್ಲಿದ್ದ ಮದ್ಯದಂಗಡಿಗೆ ಬೆಂಕಿಯಿಟ್ಟ ಉದ್ರಿಕ್ತರು
ಪ್ರತಿಭಟನಾ ನಿರತ ಸ್ಥಳೀಯರು
Published On :
ನವದೆಹಲಿ: ಗುರುಗಾಂವ್ ನ ರಿಯಾನ್ ಇಂಟರ್'ನ್ಯಾಷನಲ್ ಶಾಲಾ ಬಾಲಕನ ಹತ್ಯೆಗೆ ಸಂಬಂಧಿಸಿದಂತೆ ಪ್ರತಿಭಟನೆಯ ಕಾವು ಜೋರಾಗಿದ್ದು ಪ್ರತಿಭಟನಾಕಾರರು ಶಾಲೆಯ ಪಕ್ಕದಲ್ಲಿದ್ದ ಮದ್ಯದಂಗಡಿಗೆ ಬೆಂಕಿ ಹಚ್ಚಿದ್ದಾರೆ. 
ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದೆ. ಇನ್ನು ಶಾಲೆಯ ಮುಂಭಾಗದಲ್ಲಿ ಸೇರಿರುವ ನೂರಾರು ಮಂದಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ಪಕ್ಕದಲ್ಲೇ ಇದ್ದ ಬಾರಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ಸದ್ಯ ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ನಡೆಸುತ್ತಿದ್ದಾರೆ. 
ಪೊಲೀಸರು ನಡೆಸುತ್ತಿರುವ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ. ಬಸ್ ಚಾಲಕನನ್ನು ತಪ್ಪಿತಸ್ಥ ಎಂದು ತೋರಿಸಲಾಗುತ್ತಿದ್ದು ಆದರೆ ಇದರ ಜವಾಬ್ದಾರಿಯನ್ನು ಶಾಲೆಯ ಆಡಳಿತ ಮಂಡಳಿ ಹೊರಬೇಕು ಎಂದು ಜತೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಾಲಕನ ಪೋಷಕರು ಆಗ್ರಹಿಸಿದ್ದಾರೆ.  
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರವಾಗಿ ನ್ಯಾಯ ದೊರಕಿಸುವುದಾಗಿ ಹರಿಯಾಣದ ಶಿಕ್ಷಣ ಸಚಿವ ರಾಮ್ ಬಿಲಾಸ್ ಶರ್ಮಾ ಭರವಸೆ ನೀಡಿದ್ದಾರೆ. 
ಕಳೆದ ಶುಕ್ರವಾರ ರಿಯಾನ್ ಇಂಟರ್ ನ್ಯಾಷನಲ್ ಶಾಲೆ ಶೌಚಾಲಯದಲ್ಲಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಬಳಿಕ ಕುತ್ತಿಗೆಗೆ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಶಾಲಾ ವಾಹನದ ನಿರ್ವಾಹಕನೇ ಈ ಕುಕೃತ್ಯವನ್ನು ಎಸಗಿದ್ದಾನೆಂದು ಹೇಳಲಾಗುತ್ತಿದ್ದು ಪೊಲೀಸರು ಆತನನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.